ಯೂಸ್ಡ್ ವೆಹಿಕಲ್ ಅಸೋಸಿಯೇಶನ್‌ನಿಂದ ಪ್ರಾದೇಶಿಕ ಅಧಿಕಾರಿಯ ಭೇಟಿ
Update: 2017-05-13 23:16 IST
ಮಂಗಳೂರು, ಮೇ 13: ದ.ಕ. ಜಿಲ್ಲಾ ಯೂಸ್ಡ್ ವೆಹಿಕಲ್ ಡೀಲರ್ಸ್ ಆ್ಯಂಡ್ ಏಜೆಂಟ್ಸ್ ಅಸೋಸಿಯೇಶನ್ ನಿಯೋಗವು ಇತ್ತೀಚೆಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಯನ್ನು ಭೇಟಿಯಾಗಿ ಚರ್ಚಿಸಿ ಮನವಿ ಸಲ್ಲಿಸಿದೆ.
ಸೆಕೆಂಡ್ ಹ್ಯಾಂಡ್ ವಾಹನಗಳ ವರ್ಗಾವಣೆಯಲ್ಲಾಗುತ್ತಿರುವ ವಿಳಂಬ, ಇಂತಹ ವಾಹನಗಳು ಖರೀದಿಸುವಾಗ ವಾಹನದ ಮೇಲಿನ ಸಾಲದ ಬಗ್ಗೆ ಮಂಗಳೂರು ಒನ್ ಕೇಂದ್ರದಲ್ಲಿ ಮಾಹಿತಿ ಇಲ್ಲದಿರುವುದು, ಬಳಸಿದ ವಾಹನಗಳ ಖರೀದಿ ಮತ್ತು ವಿಕ್ರಯಕ್ಕೆ ಸಂಬಂಧಿಸಿ ಹಿಂದೆ ಬರುತ್ತಿದ್ದ ಮೊಬೈಲ್ ಸಂದೇಶಗಳು ಈಗ ಬಾರದಿರುವುದರ ಬಗ್ಗೆ ನಿಯೋಗವು ಅಧಿಕಾರಿಯೊಂದಿಗೆ ಚರ್ಚೆ ನಡೆಸಿತು.
ನಿಯೋಗದ ಮನವಿಗೆ ಸ್ಪಂದಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿಯವರು ಸಾರ್ವಜನಿಕರಿಗೆ ತೊದರೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಅಸೋಸಿಯೇಶನ್‌ನ ಪ್ರಕಟನೆ ತಿಳಿಸಿದೆ.