ಎಸೆಸೆಲ್ಸಿ ಫಲಿತಾಂಶ: ಅನುದಾನ ರಹಿತ ಶಾಲೆಗಳು ಮುಂದೆ
ಮಂಗಳೂರು, ಮೇ 13: ಈ ಬಾರಿಯ ಎಸೆಸೆಲ್ಸಿ ಫಲಿತಾಂಶದಲ್ಲಿ ಸರಕಾರಿ, ಅನುದಾನಿತ ಶಾಲೆಗಳಿಗಿಂತ ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆಯಾಗಿದ್ದರೆ.
ಜಿಲ್ಲೆಯಲ್ಲಿ ಒಟ್ಟು 30,008 ವಿದ್ಯಾರ್ಥಿಗಳು ಹಾಜರಾಗಿದ್ದು ಈ ಪೈಕಿ 24,725 (ಶೇ.82.38). ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಸರಕಾರಿ ಶಾಲೆಗಳ ಮೂಲಕ ಪರೀಕ್ಷೆಗೆ ಹಾಜರಾದ 9120 ವಿದ್ಯಾರ್ಥಿಗಳಲ್ಲಿ 6742 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ (ಶೇ 73.93).
ಅನುದಾನಿತ ಶಾಲೆಗಳ ಮೂಲಕ ಹಾಜರಾದ 10,543 ವಿದ್ಯಾರ್ಥಿಗಳ ಪೈಕಿ 8589 (ಶೇ81.47) ತೇರ್ಗಡೆಯಾಗಿದ್ದರೆ. ಅನುದಾನ ರಹಿತ ಶಾಲೆಗಳ ಮೂಲಕ ಹಾಜರಾದ 10,345 ವಿದ್ಯಾರ್ಥಿಗಳ ಪೈಕಿ 9394 ವಿದ್ಯಾರ್ಥಿಗಳು (ಶೇ.90.81) ತೇರ್ಗಡೆಹೊಂದಿದ್ದಾರೆ.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗಿಂತ ನಗರ ಪ್ರದೇಶದ ವಿದ್ಯಾರ್ಥಿಗಳು ಕೇವಲ ಶೇ.3.02ರಷ್ಟು ಫಲಿತಾಮಶದಲ್ಲಿ ಮುಂದಿದ್ದಾರೆ. ಈ ಬಾರಿ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಒಟ್ಟು 18 174 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 14758(ಶೇ 81.20) ತರ್ಗಡೆಯಾಗಿದ್ದಾರೆ. ನಗರದ ಪ್ರದೇಶದ ಶಾಲೆಗಳ ಮೂಲಕ ಒಟ್ಟು 11,834 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು,9967 (ಶೇ 84.2)ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿಯಾಗಿ ನೇರವಾಗಿ ಪರೀಕ್ಷೆಗೆ ಹಾಜರಾಗಿರುವ 1019ವಿದ್ಯಾರ್ತಿಗಳ ಪೈಕಿ 113 ಮಂದಿ ತೇರ್ಗಡೆಯಾಗಿದ್ದಾರೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ:- ಜಿಲ್ಲೆಯಲ್ಲಿ ಪರಿಕ್ಷೆಗೆ ಹಾಜರಾದ ಪರಿಶಿಷ್ಟ ಜಾತಿಯ 2175 ವಿದ್ಯಾರ್ಥಿಗಳ ಪೈಕಿ 1540(ಶೇ 70.80) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳ ಪೈಕಿ ಪರೀಕ್ಷೆಗೆ ಹಾಜರಾದ 1238ರಲ್ಲಿ 931 (ಶೇ 75.20)ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಕಳೆದ ನಾಲ್ಕು ವರ್ಷಗಳಲ್ಲಿ ಎಸೆಸೆಲ್ಸಿ ಫಲಿತಾಂಶದಲ್ಲಿ ಚೇತರಿಕೆ ಕಂಡು ಈ ಬಾರಿ ದ್ವಿತೀಯ ಸ್ಥಾನದಲ್ಲಿದೆ. 2014ರಲ್ಲಿ ರಾಜ್ಯದಲ್ಲಿ 27ನೆ ಸ್ಥಾನಕ್ಕೆ ಕುಸಿದಿದ್ದ ಜಿಲ್ಲೆ ಮರುವರ್ಷ 8ನೆ ಸ್ಥಾನಕ್ಕೆ ಏರಿತ್ತು. 2016ರಲ್ಲಿ ಮೂರನೆ ಸ್ಥಾನ ಪಡೆದಿದ್ದು ಈ ಬಾರಿ ಎರಡನೆ ಸ್ಥಾನಕ್ಕೆ ಏರಿ ಮುನ್ನಡೆ ಸಾಧಿಸಿದೆ.