ನಿರಂತರ ಅಧ್ಯಯನದಿಂದ ಯಶಸ್ಸು: ಸ್ಮಿತಾ
ಪುತ್ತೂರು, ಮೇ 13: ಕಲಿಕೆಯಲ್ಲಿನ ಯಶಸ್ಸಿಗಾಗಿ ತರಗತಿಯ ಪಾಠದ ಜೊತೆಗೆ ನಿರಂತರ ಅಧ್ಯಯನ ಮತ್ತು ಗ್ರಂಥಾಲಯದ ಸದ್ಭಳಕೆ ಅತೀ ಅಗತ್ಯ ಎಂದು ಕಳೆದ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಗಣಿತಶಾಸ್ತ್ರ ಪರೀಕ್ಷೆಯಲ್ಲಿ ದ್ವಿತೀಯ ರ್ಯಾಂಕು ಪಡೆದ ಸ್ಮಿತಾ ಕೆ ಅವರು ಅಭಿಪ್ರಾಯಪಟ್ಟರು.
ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗದ ಆಶ್ರಯದಲ್ಲಿ ಬುಧವಾರ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ 2015-16 ನೆ ಸಾಲಿನ ಸ್ನಾತಕೋತ್ತರ ಗಣಿತಶಾಸ್ತ್ರ ಪರೀಕ್ಷೆಯಲ್ಲಿ ದ್ವಿತೀಯ ರ್ಯಾಂಕು ವಿಜೇತೆಗೆ ಸನ್ಮಾನ ಕಾರ್ಯಕ್ರಮ ಮತ್ತು ಪ್ರಸಕ್ತ ಸಾಲಿನ ದ್ವಿತೀಯ ವರ್ಷದ ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಆ್ಯಂಟನಿ ಪ್ರಕಾಶ್ ಮೊಂತೆರೊ ಮತ್ತು ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗದ ಸಂಯೋಜಕ ಪ್ರೊ. ಗಣೇಶ ಭಟ್ ಅವರು ಮಾತನಾಡಿದರು.
ಸ್ನಾತಕೋತ್ತರ ವಿಭಾಗದ ಸಹ ಪ್ರಾಧ್ಯಾಪಕರಾದ ಪ್ರಸಾದ್ ಎವ್, ವೈಷ್ಣವಿ ಸಿ, ಅನುಷಾ ಎಲ್, ನಮ್ರತಾ ಜೆ ಶೆಣೈ ಮತ್ತು ಚೇತನಾ ಆರ್ ವಿ ಇದ್ದರು.
ವಿದ್ಯಾರ್ಥಿನಿಯರಾದ ಜುಲೈಕಾ ಮುನಾಜ ಸ್ವಾಗತಿಸಿ, ಸಾಧನಾ ಬಿ ವಂದಿಸಿದರು. ಅನನ್ಯ ವಿ ಕಾರ್ಯಕ್ರಮ ನಿರೂಪಿಸಿದರು.