ಮೂಡುಬಿದಿರೆ : ‘ಬಂಟರ ಸಮ್ಮಿಲನ - 2017’ ಉದ್ಘಾಟನೆ
ಮೂಡುಬಿದಿರೆ, ಮೇ 13: ಜಾತಿ ಮತ ನೋಡದೆ ನಾವೆ ಲ್ಲರೂ ಒಂದೇ ಎಂಬ ಭಾವನೆಯಿಂದ ಬಾಳಿದವರು ಬಂಟರು. ಆತ್ಮವಿಶ್ವಾಸದೊಂದಿಗೆ ಅನ್ಯಾಯದ ವಿರುದ್ಧ ಹೋರಾಟ ಮಾಡುವ ಬಂಟರು ಒಂದು ಕಡೆ ಒಟ್ಟಾಗಿ ಸೇರಿ ಒಬ್ಬರನೊಬ್ಬರು ಪ್ರೀತಿಯಿಂದ ಅರ್ಥಮಾಡಿಕೊಂಡು ಬಾಳಬೇಕಿದೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಹೇಳಿದರು. ಶನಿವಾರ ಸ್ವರಾಜ್ಯ ಮೈದಾನದಲ್ಲಿ ‘ಬಂಟೆರ್ ಬೆದ್ರ’ ಇದರ ವತಿಯಿಂದ ಪುರುಷರ ವಿಭಾಗದ ಜಿಲ್ಲಾಮಟ್ಟದ ವಾಲಿಬಾಲ್ ಮತ್ತು ಮಹಿಳೆಯರ ವಿಭಾಗದ ತ್ರೋಬಾಲ್ ಪಂದ್ಯಾಟ ಹಾಗೂ ಮಿಸ್ಟರ್ ಬಂಟ್ ಮಿಸ್ ಬಂಟ್ ‘ಬಂಟರ ಸಮ್ಮಿಲನ-2017’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಿನ್ನಿಗೋಳಿ ವಿವೇಕಾನಂದ ಸೇವಾ ಟ್ರಸ್ಟ್‌ನ ಅಧ್ಯಕ್ಷ ನಿಡ್ಡೋಡಿ ಚಾವಡಿಮನೆ ಜಗನ್ನಾಥ ಶೆಟ್ಟಿ, ಮೂಡುಬಿದಿರೆ ಬಂಟರ ಸಂಘದ ಅಧ್ಯಕ್ಷ ತಿಮ್ಮಯ್ಯ ಶೆಟ್ಟಿ, ಮೇಘನಾಥ ಶೆಟ್ಟಿ, ಡಾ. ವಿನಯ ಕುಮಾರ್ ಹೆಗ್ಡೆ, ಡಿ.ದಿನಕರ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ದಿವಾಕರ ಶೆಟ್ಟಿ ತೋಡಾರು, ಸುಚರಿತ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ಶರತ್ ಶೆಟ್ಟಿ, ರೋಹಿತ್ ಕುಮಾರ್ ಕಟೀಲು, ದೇವಿಪ್ರಸಾದ್ ಶೆಟ್ಟಿ, ಜಯಶ್ರೀ ಅಮರನಾಥ ಶೆಟ್ಟಿ, ಡಾ. ರತ್ನಾಕರ ಶೆಟ್ಟಿ, ಅಂಬಿಕಾ ಡಿ. ಶೆಟ್ಟಿ, ಸುಪ್ರಿಯಾ ಡಿ. ಶೆಟ್ಟಿ, ರೂಪಾ ಎಸ್. ಶೆಟ್ಟಿ, ಬಬಿತಾ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶಬರೀಶ್ ಶೆಟ್ಟಿ, ಸಂದೀಪ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.
ಸ್ವಪ್ನಾ ಶೆಟ್ಟಿ ಸ್ವಾಗತಿಸಿದರು. ಅರ್ಪಿತಾ ಶೆಟ್ಟಿ ಕಿನ್ನಿಗೋಳಿ ಕಾರ್ಯಕ್ರಮ ನಿರೂಪಿಸಿದರು. ಸುಧಾಕರ ಶೆಟ್ಟಿ ವಂದಿಸಿದರು.