×
Ad

ಇಂದು 32 ಬಡ ಕುಟುಂಬಗಳಿಗೆ ಮನೆಗಳ ಹಸ್ತಾಂತರ

Update: 2017-05-13 23:50 IST

ಮಂಗಳೂರು, ಮೇ 13: ಆರ್ಥಿಕವಾಗಿ ಹಿಂದುಳಿದವರಿಗೆ ಮನೆಯನ್ನು ನಿರ್ಮಿಸಿಕೊಡುವ ಉದ್ದೇಶದಿಂದ ಕಾರ್ಯಾಚರಿಸುತ್ತಿರುವ ‘ಸೌಹಾರ್ದ ಪ್ರತಿಷ್ಠಾನ’ದ ವತಿಯಿಂದ ಮೂರನೆ ಯೋಜನೆಯ 32 ಮನೆಗಳ ಹಸ್ತಾಂತರ ಕಾರ್ಯಕ್ರಮವು ಮೇ 14ರಂದು ಮೂಡುಬಿದಿರೆಯ ಬೆಳುವಾಯಿಯಲ್ಲಿ ನಡೆಯಲಿದೆ.

ಅಂದು ಸಂಜೆ 5:30ಕ್ಕೆ ಬೆಳುವಾಯಿ ಗ್ರಾಮದ ಮುರ್ಕೊತ್‌ಪಲ್ಕೆ ಎಂಬಲ್ಲಿ ನಡೆಯುವ ಕಾರ್ಯಕ್ರಮವನ್ನು ರಾಜ್ಯ ವಸತಿ ಸಚಿವ ಎಂ.ಕೃಷ್ಣಪ್ಪಉದ್ಘಾಟಿಸುವರು.

ಸೌಹಾರ್ದ ಫೌಂಡೇಶನ್ ವತಿಯಿಂದ ಮುರ್ಕೊತ್‌ಪಲ್ಕೆಯ 5 ಎಕರೆ ಜಾಗದಲ್ಲಿ ಮೂಡಾ ಮಾದರಿಯಂತೆ 104 ಮನೆಗಳ ಕಾರ್ಯಸೂಚಿಯನ್ನು ಹಮ್ಮಿಕೊಂಡು 2016ನೆ ಸಾಲಿನಲ್ಲಿ ಮನೆಗಳ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು. 104 ಮನೆಗಳನ್ನು ನಾಲ್ಕು ಕಂತುಗಳಲ್ಲಿ 2020ನೆ ಇಸವಿಯವರೆಗೆ ನಿರ್ಮಾಣ ಮಾಡಲಾಗುವುದು. ಮೊದಲ ಕಂತಿನ 32 ಮನೆಗಳು ಇದೀಗ ನಿರ್ಮಾಣಗೊಂಡಿದ್ದು, ಆಯ್ದ ಅರ್ಹ ಫಲಾನುಭವಿಗಳಿಗೆ ಮೇ 14ರಂದು ಹಸ್ತಾಂತರಿಸಲಾಗುವ

ುದು ಎಂದು ಪ್ರತಿಷ್ಠಾನದ ಪ್ರಕಟನೆ ತಿಳಿಸಿದೆ. ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿಯಾಗಿ ಎರಿಕ್ ಕೊರೆಯಾ, ಟ್ರಸ್ಟಿಗಳಾಗಿ ಜಾನ್ ಎಲ್.ಡಿಸೋಜ, ಲೂವಿಸ್ ಜೆ.ಪಿಂಟೊ, ಟಾಯ್ಟಸ್ ನೊರೊನ್ಹಾ ಮತ್ತು ಫಾದರ್ ಜೆ.ಬಿ.ಸಲ್ದಾನ ಕಾರ್ಯನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News