×
Ad

ಇಂದಿನಿಂದ ಮುಸ್ಲಿಂ ಯುವ ಸಮಾವೇಶ

Update: 2017-05-13 23:51 IST

ಮಂಗಳೂರು, ಮೇ 13: ಡಿವೈಎಫ್‌ಐ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ಮೇ 14 ಮತ್ತು 15ರಂದು ಮಂಗಳೂರಿನ ಬಲ್ಮಠದ ಶಾಂತಿನಿಲಯದಲ್ಲಿ ಮುಸ್ಲಿಂ ಯುವ ಸಮಾವೇಶ ನಡೆಯಲಿದೆ.

ಡಿವೈಎಫ್‌ಐ ರಾಷ್ಟ್ರೀಯ ಅಧ್ಯಕ್ಷ ಮುಹಮ್ಮದ್ ರಿಯಾಝ್ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಪ್ರೊ. ಮುಝಫರ್ ಅಸ್ಸಾದಿ, ಸಾಹಿತಿ ಭಾನು ಮುಷ್ತಾಕ್, ಪ್ರೊ. ರಹ್ಮತ್ ತರೀಕೆರೆ, ರಂಜಾನ್ ದರ್ಗಾ, ಮಾಜಿ ಸಚಿವ ಬಿ.ಎ. ಮೊಯ್ದಿನ್, ದಿನೇಶ್ ಅಮೀನ್‌ಮಟ್ಟು, ಜಿ.ವಿ.ಶ್ರೀರಾಮರೆಡ್ಡಿ, ‘ವಾರ್ತಾಭಾರತಿ’ಯ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಸಹಿತ ಮುಸ್ಲಿಂ ಸಮುದಾಯದ ಹಾಗೂ ಇತರ ಬರಹಗಾರರು, ಚಿಂತಕರು, ಸಾಹಿತಿಗಳು ಸಮಾವೇಶದಲ್ಲಿ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News