×
Ad

ಮಿತ್ತಬೈಲ್: ವಾರ್ಷಿಕ ಮಜ್ಲಿಸುನ್ನೂರು, ದ್ಸಿಕ್ರ್, ಸ್ವಾಲಾತ್ ಕಾರ್ಯಕ್ರಮ

Update: 2017-05-13 23:59 IST

ಬಂಟ್ವಾಳ, ಮೇ 13: ಮುಹಿಯುದ್ದೀನ್ ಜುಮಾ ಮಸೀದಿ ಮಿತ್ತಬೈಲ್ ಇದರ ಆಧೀನದಲ್ಲಿ ಪ್ರತೀ ವಾರ ನಡೆದುಕೊಂಡು ಬರುತ್ತಿರುವ ದ್ಸಿಕ್ರ್, ಸ್ವಲಾತ್ ಹಾಗೂ ಮಜ್ಲಿಸುನ್ನೂರಿನ 23ನೆ ವಾರ್ಷಿಕದ ಅಂಗವಾಗಿ ಮೇ 14ರಂದು ಬೆಳಗ್ಗೆ 9 ಗಂಟೆಯಿಂದ ರಾತ್ರಿ 9:30ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.

ಬೆಳಗ್ಗೆ 9 ಗಂಟೆಗೆ ಸಮಸ್ತ ಉಪಾಧ್ಯಕ್ಷ ಕೆ.ಪಿ.ಅಬ್ದುಲ್ ಜಬ್ಬಾರ್ ಉಸ್ತಾದರ ನೇತೃತ್ವದಲ್ಲಿ ಮುಖಾಂ ಝಿಯಾರತ್, 9:30ಕ್ಕೆ ಅಸೈಯ್ಯದ್ ಅಮೀರ್ ತಂಙಳ್ ಕಿನ್ಯ ನೇತೃತ್ವದಲ್ಲಿ ಖತಮುಲ್ ಕುರ್‌ಆನ್, 10:30ಕ್ಕೆ ಹಾಫಿಲ್ ಕೆ.ಪಿ.ಅಬ್ದುಲ್ ಹಕೀಂ ಯಮಾನಿ ಲಕ್ಷದೀಪ ನೇತೃತ್ವದಲ್ಲಿ ಬೃಹತ್ ಬುರ್ದಾ ಮಜ್ಲಿಸ್, 2 ಗಂಟೆಗೆ ಅಸೈಯದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ಬೆಂಗಳೂರು ನೇತೃತ್ವದಲ್ಲಿ ಮಜ್ಲಿಸುನ್ನೂರು ಆಧ್ಯಾತ್ಮಿಕ ಸಂಗಮ ಕಾರ್ಯಕ್ರಮ ನಡೆಯಲಿದೆ.

 ಸಂಜೆ 4 ಗಂಟೆಗೆ ಮಿತ್ತಬೈಲ್ ಖತೀಬ್ ಎಂ.ವೈ.ಅಶ್ರಪ್ ಪೈಝಿರವರಿಂದ ’ಆತ್ಮ ಸಂಸ್ಕರಣೆ’ ವಿಷಯದಲ್ಲಿ ಧಾರ್ಮಿಕ ಪ್ರಬಾಷಣ ನಡೆಯಲಿದ್ದು ಮಗ್ರಿಬ್ ನಮಾಝ್ ಬಳಿಕ ಅಸೈಯದ್ ಅಲ್ ಮಶ್‌ಹೂರ್ ಆಟ್ಟಕೋಯ ತಂಙಳ್ ಅಲ್ ಅರ್ಹರಿ ಹಾಗೂ ಕೆ.ಪಿ.ಅಬ್ದುಲ್ ಜಬ್ಬಾರ್ ಉಸ್ತಾದರ ನೇತೃತ್ವದಲ್ಲಿ ಬೃಹತ್ ದ್ಸಿಕ್ರ್ ಮಜ್ಲಿಸ್ ಕಾರ್ಯಕ್ರಮ ನಡೆಯಲಿದೆ ಎಂದು ಮಸೀದಿ ಆಡಳಿತ ಮಂಡಳಿಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News