ಈ ಮೊಟ್ಟೆ ಸಾಗಾಟ ವಾಹನದಲ್ಲಿದ್ದ ಚಿನ್ನದ ಪ್ರಮಾಣ ಕೇಳಿದರೆ ನೀವು ಬೆಚ್ಚಿಬೀಳಬಹುದು!

Update: 2017-05-14 14:32 GMT

ಹೊಸದಿಲ್ಲಿ, ಮೇ 14: ಮೊಟ್ಟೆ ಸಾಗಿಸುತ್ತಿದ್ದ ವಾಹನವೊಂದನ್ನು ತಡೆದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ ಐ)ದ ಅಧಿಕಾರಿಗಳು ವಾಹನದಲ್ಲಿದ್ದ ಭಾರೀ ಬೆಲೆಬಾಳುವ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಅಷ್ಟಕ್ಕೂ ಮೊಟ್ಟೆ ಸಾಗಾಟ ವಾಹನದಲ್ಲಿದ್ದದ್ದು ಬರೋಬ್ಬರಿ 44 ಕೆ,ಜಿ.ಯಷ್ಟು ಚಿನ್ನದ ಗಟ್ಟಿಗಳು.

ಗುಜರಾತ್ ನ ಮುಂದ್ರಾ ಬಂದರಿನಿಂದ ಬರುತ್ತಿದ್ದ ವಾಹನವನ್ನು ಖಚಿತ ಮಾಹಿತಿಯ ಮೇರೆಗೆ ತಡೆದ ಅಧಿಕಾರಿಗಳು ಹರ್ನೇಕ್ ಸಿಂಗ್ ಎಂಬಾತನನ್ನು ಬಂಧಿಸಿದ್ದಾರೆ.

ಸಾಕ್ಷಿಗಳು, ಆಧಾರಗಳು ಹಾಗೂ ಭಾರೀ ಮೊತ್ತದ ಹವಾಲಾ ಹಣದ ಬಗ್ಗೆ ಮಾಹಿತಿ ಕಲೆಹಾಕಲು ಡಿಆರ್ ಐ ಆರೋಪಿಯ ಮನೆ ಹಾಗೂ ಫ್ಯಾಕ್ಟರಿಯ ಮೇಲೆ  ದಾಳಿ ನಡೆಸಿದೆ.

ಕೋಳಿಮೊಟ್ಟೆಯನ್ನು ಸಾಗಿಸುವ ವಾಹನದಲ್ಲಿ ಇಂಕ್ಯುಬೇಟರ್ ನಲ್ಲಿ ಪ್ರತೀ ಬಾರಿ 40ರಿಂದ 50 ಕೆ.ಜಿ.ಯಷ್ಟು ಚಿನ್ನವನ್ನು ಸಾಗಿಸಲಾಗುತ್ತಿತ್ತು. ವಾಹನ ಸಾಗುವ ಸಂದರ್ಭ ಶಬ್ಧವಾಗುವುದನ್ನು ತಡೆಯಲು ಚಿನ್ನದ ಗಟ್ಟಿಗಳಿಗೆ ಸಿಲ್ವರ್ ಗ್ರೇ ಪೇಪರನ್ನು ಸುತ್ತಲಾಗುತ್ತಿತ್ತು ಎನ್ನಲಾಗಿದೆ.

ಇದೇ ರೀತಿ ಈ ವರ್ಷದಲ್ಲಿ ದುಬೈಯಿಂದ 90 ಕೋಟಿ ಮೌಲ್ಯದ ಸುಮಾರು 300 ಕೆ.ಜಿ.ಯಷ್ಟು ಚಿನ್ನವನ್ನು ಸ್ಮಗ್ಲಿಂಗ್ ಮಾಡಲಾಗಿತ್ತು ಎನ್ನಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News