ಫ್ರಾನ್ಸ್ ಅಧ್ಯಕ್ಷರಾಗಿ ಮ್ಯಾಕ್ರೊನ್ ಅಧಿಕಾರ ಸ್ವೀಕಾರ
ಪ್ಯಾರಿಸ್,ಮೇ 14: ಫ್ರಾನ್ಸ್‌ನ ನೂತನ ಅಧ್ಯಕ್ಷರಾಗಿ ಇಮ್ಯಾನುಯೆಲ್ ಮ್ಯಾಕ್ರೊನ್ ರವಿವಾರ ಅಧಿಕಾರ ಸ್ವೀಕರಿಸಿದ್ದಾರೆ. ಪ್ಯಾರಿಸ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ನಿರ್ಗಮನ ಅಧ್ಯಕ್ಷ ಸೋಶಿಯಲಿಸ್ಟ್ ಪಕ್ಷದ ಫ್ರಾಂಕೊಯಿಸ್ ಹೊಲ್ಲಾಂಡ್ ಅವರು ಮ್ಯಾಕ್ರೊನ್‌ಗೆ ಅಧಿಕಾರವನ್ನು ಹಸ್ತಾಂತರಿಸಿದರು.
39 ವರ್ಷದ ಮ್ಯಾಕ್ರೊನ್ ಅವರು ಮಧ್ಯಮಮಾರ್ಗಿಯಾಗಿದ್ದು, ಫ್ರಾನ್ಸ್‌ನ ಈವರೆಗಿನ ಅತ್ಯಂತ ಕಿರಿಯ ವಯಸ್ಸಿನ ಅಧ್ಯಕ್ಷರೆಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಪ್ಯಾರಿಸ್‌ನ ಎಲಿಸಂ ಪ್ಯಾಲೇಸ್‌ನಲ್ಲಿ ನಡೆದ ಅಧಿಕಾರ ಹಸ್ತಾಂತರ ಕಾರ್ಯಕ್ರಮದ ವೇಳೆ ಅವರ ಪತ್ನಿ 64 ವರ್ಷ ವಯಸ್ಸಿನ ಬ್ರಿಗೆಟ್ ಉಪಸ್ಥಿತರಿದ್ದರು.
ಅಧಿಕಾರ ಹಸ್ತಾಂತರದ ಬಳಿಕ ಮ್ಯಾಕ್ರೊನ್ ಅವರು ಹಾಲಂಡ್ ಜೊತೆ ಮಾತುಕತೆ ನಡೆಸಿದ್ದು, ಅಲ್ಲಿ ಅವರಿಗೆ ನಿರ್ಗಮನ ಅಧ್ಯಕ್ಷರು ಅಣ್ವ್ತಸ್ತ್ರಗಳ ಉಡಾವಣೆಗೆ ಅಗತ್ಯವಿರುವ ರಹಸ್ಯಸಂಕೇತಗಳನ್ನು ನೀಡಿದರು.
ನೂತನ ಅಧ್ಯಕ್ಷ ಮ್ಯಾಕ್ರೊನ್ ಅವರ ಮುದೆ ದೇಶವನ್ನು ಕಾಡುತ್ತಿರುವ ನಿರುದ್ಯೋಗ, ಭಯೋತ್ಪಾದನೆಯನ್ನು ನಿಭಾಯಿಸುವ ಗುರುತರವಾದ ಹೊಣೆಗಾರಿಕೆಯನ್ನು ಎದುರಿಸುತ್ತಿದ್ದಾರೆ.