ಸಿಲ್ಕ್ ರಸ್ತೆ ಯೋಜನೆಗೆ 15.5 ಶತಕೋಟಿ ಡಾಲರ್: ಚೀನಾ ಕೊಡುಗೆ

Update: 2017-05-14 15:45 GMT

ಬೀಜಿಂಗ್, ಮೇ 14: ತಾನು ನಿರ್ಮಿಸಲುದ್ದೇಶಿಸಿರುವ ನೂತನ ಸಿಲ್ಕ್ ರಸ್ತೆಯು, ಈ ಶತಮಾನದ ಬೃಹತ್ ಯೋಜನೆಯೆಂದು ಚೀನಾ ರವಿವಾರ ಬಣ್ಣಿಸಿದೆ. ಏಶ್ಯ, ಯುರೋಪ್ ಹಾಗೂ ಆಫ್ರಿಕಾ ದೇಶಗಳನ್ನು ರಸ್ತೆ ಮಾರ್ಗದ ಮೂಲಕ ಬೆಸೆಯುವ ಈ ಮಹತ್ವಾಕಾಂಕ್ಷಿ ಯೋಜನೆಗೆ 100 ಶತಕೋಟಿ ಯುವಾನ್‌ಗಳ ಕೊಡುಗೆಯನ್ನು ಅದು ನೀಡಿದೆ.

  
ಚೀನಾ ಅಧ್ಯಕ್ಷ ಕ್ಸಿಜಿನ್‌ಪಿಂಗ್ ರವಿವಾರ ಬೀಜಿಂಗ್‌ನಲ್ಲಿ ಆರಂಭಗೊಂಡ ‘ಒಂದೇ ವರ್ತುಲ, ಒಂದೇ ರಸ್ತೆ’ ಶೃಂಗಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದ ಸಂದರ್ಭದಲ್ಲಿ ಈ ಕೊಡುಗೆಯನ್ನು ಪ್ರಕಟಿಸಿದರು. ‘‘ಇದೊಂದು ಶತಮಾನದ ಯೋಜನೆಯಾಗಿದ್ದು, ವಿಶ್ವದಾದ್ಯಂತದ ಜನರು ಇದರ ಪ್ರಯೋಜನವನ್ನು ಪಡೆಯಲಿದ್ದಾರೆಂ’’ ಎಂದು ಅವರು ಸಾರಿದರು. ಒಂದೇ ರಸ್ತೆ, ಒಂದೇ ವರ್ತುಲ ಉಪಕ್ರಮದಲ್ಲಿ ಪಾಲ್ಗೊಳ್ಳುವ ದೇಶಗಳು ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಚೀನವು 60 ಶತಕೋಟಿ ಡಾಲರ್‌ಗಳ ಅರ್ಥಿಕ ನೆರವನ್ನು ನೀಡಲಿದೆಯೆಂದು ಅವರು ತಿಳಿಸಿದರು.

ಸಂಶೋಧನವಾ ಕ್ಷೇತ್ರದಲ್ಲಿ ಸಹಕಾರವನ್ನುು ವರ್ಧಿಸುವ ಉದ್ದೇಶದಿಂದ ಚೀನಾವು ಈ ಯೋಜನೆಯಲ್ಲಿ ಪಾಲ್ಗೊಳ್ಳುವ ದೇಶಗಳಲ್ಲಿ 50 ಜಂಟಿ ಪ್ರಯೋಗಶಾಲೆಗಳನ್ನು ಸ್ಥಾಪಿಸಲಿದೆಯೆಂದು ಅವರು ತಿಳಿಸಿದರು.

ಸಮಾವೇಶಕ್ಕೆ ಭಾರತ ಗೈರು

ರವಿವಾರ ಆರಂಭಗೊಂಡ ಒಂದೇ ರಸ್ತೆ, ಒಂದೇ ವರ್ತುಲ ಶೃಂಗಸಭೆಗೆ ಭಾರತವು ಗೈರುಹಾಜರಾಗಿದೆ. ಈ ಉಪಕ್ರಮದ ಒಂದು ಭಾಗವಾದ 50 ಶತಕೋಟಿ ಡಾಲರ್ ವೆಚ್ಚದ ಚೀನಾ-ಪಾಕ್ ಆರ್ಥಿಕ ಕಾರಿಡಾರ್ ಯೋಜನೆ (ಸಿಪೆಕ್)ಯು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹಾದುಹೋಗುವುದನ್ನು ಭಾರತ ವಿರೋಧಿಸಿದೆ. ಆದಾಗ್ಯೂ ಕೆಲವು ಭಾರತೀಯ ವಿದ್ವಾಂಸಕರು ಮೊದಲ ದಿನದ ಸಮಾವೇಶದಲ್ಲಿ ಭಾಗವಹಿಸಿದ್ದವು. ಈ ಶೃಂಗಸಭೆಯಲ್ಲಿ ರಶ್ಯ, ತುರ್ಕಿ, ಪಾಕ್ ಸೇರಿದಂತೆ 29 ರಾಷ್ಟ್ರಗಳು ಪಾಲ್ಗೊಂಡಿವೆ.

ಪಾಕ್ ಪ್ರಧಾನಿ ನವಾಝ್ ಶರೀಫ್, ಶ್ರೀಲಂಕಾ ಪ್ರಧಾನಿ ರಾನಿಲ್ ವಿಕ್ರಮಸಿಂೆ, ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಹಾಗೂ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಈ ಉನ್ನತ ಮಟ್ಟದ ಶೃಂಗಸಭೆಯಲ್ಲಿ ಪಾಲ್ಗೊಂಡರು.

 ಸಮಾವೇಶಕ್ಕೆ ತನ್ನ ಪ್ರತಿನಿಧಿಯಾಗಿ ಅಮೆರಿಕವು ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಏಶ್ಯ ವಿಭಾಗದ ಹಿರಿಯ ನಿರ್ದೇಶಕರಾದ ಮ್ಯಾಟ್ ಪಾಟ್ಟಿಂಜರ್ ಅವರನ್ನು ಕಳುಹಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News