×
Ad

"ಪೊಲೀಸರು ಹಿಂದೂಗಳ ಪರವಾಗಿ ನಿಲ್ಲಬೇಕು"

Update: 2017-05-14 21:31 IST

ಮೂಡುಬಿದಿರೆ, ಮೇ 14: ಕಾಶ್ಮೀರದ ಮುಸ್ಲಿಂ ಯುವಕರು ಪೊಲೀಸರು ಹಾಗೂ ಸೈನಿಕರ ಮೇಲೆ ಹಲ್ಲೆ ನಡೆಸುತ್ತಾರೆ. ಸೈನಿಕರಿಗೆ, ಪೊಲೀಸರಿಗೆ ತೊಂದರೆಯಾದಾಗ ಹಿಂದೂಗಳು ಸಹಾಯ ಮಾಡುತ್ತಾರೆ. ಹೀಗಾಗಿ ಪೊಲೀಸರು ಅಲ್ಪಸಂಖ್ಯಾತರ ಪರವಾಗಿ ನಿಲ್ಲದೇ, ಹಿಂದೂಗಳ ಪರವಾಗಿ ನಿಲ್ಲಬೇಕು ಎಂದು ವಿಶ್ವ ಹಿಂದೂ ಪರಿಷತ್ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ ಎಂ. ಹೇಳಿದರು.

ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ರವಿವಾರ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಮೂಡುಬಿದಿರೆ ಪ್ರಖಂಡದ ವತಿಯಿಂದ ನಡೆದ ಹಿಂದೂ ಯುವ ಸಮಾವೇಶದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ಹಿಂದೂವಾಗಿರುವ ಅಕ್ಷಯ್ ಕುಮಾರ್ ಸೈನಿಕರ ನಿಧಿಗೆ ದೇಣಿಗೆಯನ್ನು ನೀಡಿದ್ದಾರೆ. ಆದರೆ ಶಾರೂಕ್ ಖಾನ್, ಅಮೀರ್ ಖಾನ್, ದ.ಕ. ಜಿಲ್ಲೆಯಲ್ಲಿರುವ ಸಚಿವ ಯು.ಟಿ. ಖಾದರ್ ಮುಂತಾದ ಮುಸ್ಲಿಮರು ದೇಣಿಗೆ ನೀಡಿದ್ದಾರೆಯೇ ಎಂದು ಪ್ರಶ್ನಿಸಿದರು.

ಲವ್ ಜಿಹಾದ್, ಮತಾಂತರಗಳು ದೇಶದಲ್ಲಿ ವ್ಯಾಪಕವಾಗಿ ನಡೆಯುತ್ತಿದ್ದು, ಆ ಮೂಲಕ ಹಿಂದೂ ಧರ್ಮದ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಇದೇ ಲವ್ ಜಿಹಾದನ್ನು ನಾವು ವ್ಯವಸ್ಥಿತವಾಗಿ ವಾಪಸ್ ಮಾಡಬೇಕಿದೆ. ಹಿಂದೂ ಯುವಕರು ಮನಸ್ಸು ಮಾಡಿದರೆ ಮುಸ್ಲಿಂ ಯುವತಿಯರನ್ನು ಪ್ರೇಮವಿವಾಹವಾಗುವುದಕ್ಕೆ ಶಕ್ತರು. ಆ ಮೂಲಕ ಹಿಂದೂ ಧರ್ಮಕ್ಕೆ ಮುಸ್ಲಿಂ ಯುವತಿಯರನ್ನು ವ್ಯಾಪಕವಾಗಿ ಮತಾಂತರಗೊಳಿಸಬೇಕಾಗಿದೆ. ಹಿಂದೂ ಮನೆಗಳ ಹಿರಿಯರು ಮುಸ್ಲಿಂ ಯುವತಿಯರನ್ನು ಸೊಸೆಯಂದಿರನ್ನಾಗಿ ಮಾಡುವುದಕ್ಕೆ ಸದಾ ತಯಾರಾಗಿರಬೇಕು ಎಂದರು.

ಸಮಾವೇಶದುದ್ದಕ್ಕೂ ಪ್ರಚೋದನಕಾರಿ ಭಾಷಣ: 

ತನ್ನ ಭಾಷಣದುದ್ದಕ್ಕೂ ಪ್ರಚೋದನಕಾರಿ ಭಾಷಣ ಮಾಡಿದ ಗೋಪಾಲ್, ಹಿಂದೂಗಳು ಏಕಪತ್ನಿವೃತಸ್ಥರು. ಶ್ರೀರಾಮ ಏಕಪತ್ನಿಯನ್ನು ಹೊಂದಿದ್ದ ಆದರೆ, ಆತನ ತಂದೆ ದಶರಥ ಮೂವರು ಪತ್ನಿಯರನ್ನು ಹೊಂದಿದ್ದ. ಅದರಂತೆ ಶ್ರೀಕೃಷ್ಣ 16 ಸಾವಿರ ಕನ್ಯೆಯರನ್ನು ಹೊಂದಿದ್ದ. ಹೀಗಾಗಿ ಹಿಂದುಗಳಿಗೆ ಬಹುಪತ್ನಿತ್ವವೂ ಸಾಧ್ಯವಿದೆ. ಹೀಗಾಗಿ ಘರ್ ವಾಪಸಿಗೆ ನಾವು ತಯಾರಿದ್ದೇವೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಜರಂಗದಳ ಕರ್ನಾಟಕ ರಾಜ್ಯ ಪ್ರಾಂತ ಸಂಚಾಲಕ ಶರಣ್ ಪಂಪ್‌ವೆಲ್ ಮಾತನಾಡಿ, ಭಾರತಾಂಬೆಯ ಮೇಲೆ ಮೊಘಲರಿಂದ ಆರಂಭಗೊಂಡ ದಾಳಿ ಇತ್ತೀಚಿಗೆ ಪಿಎಫ್‌ಐ ಎಂಬ ಸಂಘಟನೆಯವರೆಗೆ ನಿರಂತರವಾಗಿ ನಡೆದುಬಂದಿದೆ. ಮೂಡುಬಿದಿರೆಯ ಪ್ರಶಾಂತ್ ಪೂಜಾರಿ ಸಹಿತ ಸಾವಿರಾರು ಹಿಂದೂಗಳನ್ನು ಹತ್ಯೆ ಮಾಡಲಾಗಿದೆ. ಮತಾಂತರ, ಲವ್‌ಜಿಹಾದ್‌ನ ವಿರುದ್ಧ ಹಿಂದೂ ಸಮಾಜ ಎದೆತಟ್ಟಿ ನಿಲ್ಲಬೇಕಿದೆ ಎಂದರು.

ವಿಹಿಂಪ ಕರ್ನಾಟಕ ಪ್ರಾಂತ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್, ಹಿಂದೂ ಯುವ ಸಮಾವೇಶದ ಸಂಚಾಲಕ ಚೇತನ್ ಕುಮಾರ್ ಶೆಟ್ಟಿ ಮಾತನಾಡಿದರು.

ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಬಲ್ಯೊಟ್ಟು ಸೇವಾಶ್ರಮದ ವಿಖ್ಯಾತನಂದ ಸ್ವಾಮೀಜಿ, ಕೇಮಾರು ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ, ಕರಿಂಜೆ ಶ್ರೀ ಕ್ಷೇತ್ರದ ಮುಕ್ತಾನಂದ ಸ್ವಾಮೀಜಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಕಾರ್ಯಕ್ರಮಕ್ಕೂ ಮುನ್ನ ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಸ್ವರಾಜ್ಯ ಮೈದಾನದವರೆಗೆ ಶೋಭಾಯಾತ್ರೆ ನಡೆಯಿತು. 
ಜಗದೀಶ ಶೇಣವ, ಕೆ. ವಿಶ್ವನಾಥ ಪ್ರಭು, ಶ್ಯಾಮ ಹೆಗ್ಡೆ, ಎಂ. ಶಾಂತರಾಮ ಕುಡ್ವ, ಎಸ್.ಎನ್. ಬೋರ್ಕರ್ ಉಪಸ್ಥಿತರಿದ್ದರು.

ಜಾತಿ ಪದ್ಧತಿಯನ್ನು ಕಳಚಿ ಅರಬ್ಬಿ ಸಮುದ್ರಕ್ಕೆಸೆಯಿರಿ: ಕೇಮಾರು ಶ್ರೀ

ಒಬ್ಬ ಸ್ವಾಮೀಜಿಯಾದರೆ ಅಥವಾ ಸಂತನಾದರೆ ಆತನನ್ನು ಜಾತಿಯ ನೆಲೆಯಲ್ಲಿ ನೋಡಲಾಗುತ್ತಿದೆ. ಇದನ್ನು ಹಿಂದೂ ಸಮಾಜದಿಂದ ಹೋಗಲಾಡಿಸಬೇಕಿದೆ. ಹಿಂದೂ ಸಮಾವೇಶವನ್ನು ಒಗ್ಗಟ್ಟಿನ ನೆಲೆಯಲ್ಲಿ ನಡೆಸಲಾಗುತ್ತಿದೆ. ಆದರೆ ಹೊರಗೆ ಜಾತಿವಾದ ದಟ್ಟವಾಗಿದೆ. ಜಾತಿಪದ್ಧತಿಯ ಬಗ್ಗೆ ಅಪಸ್ವರ ಇಲ್ಲ. ಆದರೆ ಜಾತಿವಾದದ ಬಗ್ಗೆ ಖಂಡಿತ ವಿರೋಧವಿದೆ. ಶೂದ್ರ ಎಂಬುದು ಹಿಂದೂ ಸಮಾಜವನ್ನು ಗೊಂದಲಕ್ಕೀಡು ಮಾಡಿರುವ ಒಂದು ಶಬ್ಧ. ಇದರಿಂದಾಗಿ ಅಸ್ಪ್ರಶ್ಯತೆ ಸಮಾಜದಲ್ಲಿ ಅಧಿಕಗೊಳ್ಳುತ್ತಿದೆ. ಇದನ್ನು ತೊಡೆದುಹಾಕುವ ಕಾರ್ಯವಾಗಬೇಕಿದೆ ಎಂದು ಕೇಮಾರು ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News