ದೊಣ್ಣೆಯಿಂದ ಹೊಡೆದು ಅತ್ತೆಯನ್ನು ಕೊಲೆಗೈದ ಅಳಿಯ
Update: 2017-05-14 22:03 IST
ಬಂಟ್ವಾಳ, ಮೇ 14: ಪತಿ-ಪತ್ನಿಯರ ಜಗಳ ನಿಲ್ಲಿಸಲು ಹೋದ ಅತ್ತೆಯನ್ನು ಅಳಿಯನೇ ಕೊಲೆಗೈದ ಘಟನೆ ಬಂಟ್ವಾಳ ತಾಲೂಕಿನ ಮಂಚಿ ಮೋಂತಿಮಾರ್ ನಲ್ಲಿ ನಡೆದಿದೆ.
ಕುಸುಮಾ ಎಂಬವರು ಮೃತಪಟ್ಟ ಮಹಿಳೆಯಾಗಿದ್ದು, ಆರೋಪಿ ಜಯಪ್ರಸಾದ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಮಗಳು ಹಾಗೂ ಅಳಿಯ ಜಗಳವಾಡುತ್ತಿದ್ದುದನ್ನು ಕಂಡ ಕುಸುಮಾ ಜಗಳ ನಿಲ್ಲಿಸಲು ಹೋಗಿದ್ದು, ಈ ಸಂದರ್ಭ ಜಯಪ್ರಸಾದ್ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಕುಸುಮಾ ಮೃತಪಟ್ಟಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.