ಯುವಕನಿಗೆ ತಂಡದಿಂದ ಹಲ್ಲೆ
Update: 2017-05-14 23:01 IST
ಮಣಿಪಾಲ, ಮೇ 14: ತಂಡವೊಂದು ಯುವಕನಿಗೆ ಚೂರಿಯಿಂದ ಇರಿದು ಹಲ್ಲೆ ನಡೆಸಿರುವ ಘಟನೆ ಮಣಿಪಾಲ ಈಶ್ವರ ನಗರದ ರೀಗಲ್ ಹಿಲ್ಸ್ ಬಳಿ ನಡೆದಿದೆ.
ಅನಂತನಗರದ ಅರ್ಜುನ್ ಜಿ.ಶೆಟ್ಟಿ(21) ಎಂಬವರಿಗೆ ಆತನ ಪರಿಚಯದ ನಿದೀಶ್, ನಿಮಿಶ್, ಮನೀಶ್ ಹಾಗೂ ಇತರ ಇಬ್ಬರು ಸೇರಿಕೊಂಡು ಹಲ್ಲೆ ನಡೆಸಿ, ಗಾಯಗೊಳಿಸಿದ್ದು ಜೀವಬೆದರಿಕೆ ಹಾಕಿದ್ದಾರೆ ಎಂದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.