ಉಡುಪಿ: ಜಿಲ್ಲೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳು
ಉಡುಪಿ, ಮೇ 14: ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಆಂಗ್ಲ ಹಾಗೂ ಕನ್ನಡ ಮಾಧ್ಯಮಗಳಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳ ವಿವರ ಹೀಗಿದೆ.
ಆಂಗ್ಲ ಮಾಧ್ಯಮ: 1.ಮಂಜೇಶ್ ಎಸ್., ಸ.ಪ.ಪೂ.ಕಾಲೇಜು ಬೈಂದೂರು, 1.ಚಿನ್ಮಯಿ, ಸ.ಪ.ಪೂ.ಕಾಲೇಜು ವಂಡ್ಸೆ, 1.ರಂಜೀತಾ, ಸ.ಪ. ಪೂ.ಕಾಲೇಜು ಉಪ್ಪುಂದ (ಮೂವರು ತಲಾ 622), 2.ಹರ್ಬಲ್ ಹಾಜಿಲ್ ಡಿಸೋಜ, ಡಾನ್‌ಬಾಸ್ಕೋ ಆ.ಮಾ.ಪ್ರೌಶಾಲೆ ಶಿರ್ವ, 2.ವಿಜೇತಾ, ಸಾಂದೀಪನ ಆ.ಮಾ.ಪ್ರೌ.ಶಾಲೆ ಕಿರಿಮಂಜೇಶ್ವರ, 2.ಬಿ.ಶಶಾಂಕ್ ಅಡಿಗ, ಎಸ್‌ಎಂಎಸ್ ಆ.ಮಾ.ಪ್ರೌ.ಶಾಲೆ ಬ್ರಹ್ಮಾವರ (ಮೂವರು ತಲಾ 621).
3.ಪ್ರಥಿಕ್ ನಾಯಕ್, ಟಿ.ಎ.ಪೈ ಆ.ಮಾ.ಪ್ರೌ.ಶಾಲೆ ಕುಂಜಿಬೆಟ್ಟು ಉಡುಪಿ, ಮನೀಶಾ ಭಟ್ ಎಸ್‌ಎನ್‌ವಿ ಪ್ರೌ.ಶಾಲೆ ಹಿರಿಯಂಗಡಿ ಕಾರ್ಕಳ, ಶ್ರೇಯಸ್ ಎಸ್.ಶೆಟ್ಟಿ, ಶ್ರೀವೆಂಕಟರಮಣ ಆ.ಮಾ.ಪ್ರೌ.ಶಾಲೆ ಕುಂದಾಪುರ, ಸಿಂಚನ ಎಸ್. ಶೆಟ್ಟಿ, ವಿವೇಕ ಆ.ಮಾ.ಪ್ರೌ.ಶಾಲೆ ಕೋಟ, ಪಲ್ಲವಿ ಪ್ರಭು, ಶ್ರೀಅನಂತೇಶ್ವರ ಆ.ಮಾ.ಪ್ರೌ.ಶಾಲೆ ಬೈಲಕೆರೆ ಉಡುಪಿ ಹಾಗೂ ಅನುಶ್ರೀ ಡಿ.ಪೂಜಾರಿ, ಜ್ಞಾನಸುಧಾ ಆ.ಮಾ.ಪ್ರೌ.ಶಾಲೆ ಕುಕ್ಕುಂದೂರು ಕಾರ್ಕಳ (ಆರು ಮಂದಿ ತಲಾ 620).
ಕನ್ನಡ ಮಾಧ್ಯಮ: 1.ಶ್ರೀವತ್ಸ ರಾವ್ ಬಿ.ವಿ., ಸ.ಪ.ಪೂ.ಕಾಲೇಜು ಶಂಕರನಾರಾಯಣ (619), 2.ಸೌಜನ್ಯ ಕುಮಾರಿ, ಸ.ಪ್ರೌ.ಶಾಲೆ ಹೆಸ್ಕತ್ತೂರು ಕುಂದಾಪುರ (615), 3.ಶ್ರೀಶ್ರೀ, ಸ.ಪ್ರೌ.ಶಾಲೆ ಆವರ್ಸೆ ಉಡುಪಿ ಹಾಗೂ ಪೃಥ್ವಿರಾಣಿ, ಶ್ರೀಮುಕಾಂಬಿಕಾ ಟೆಂಪಲ್ ಹೈಸ್ಕೂಲ್ ಹೊಸೂರು ಕುಂದಾಪುರ (614), 4.ಅಮೃತವರ್ಷಿಣಿ, ಯು.ಕಮಲಾಬಾಯಿ ಹೈಸ್ಕೂಲ್ ಕಡಿಯಾಳಿ ಉಡುಪಿ ಮತ್ತು ಪ್ರಜ್ವಲ್, ಸ.ಪ್ರೌ.ಶಾಲೆ ಉಪ್ಪಿನಕುದ್ರು ಕುಂದಾಪುರ (612).
5.ಉಮೇಶ ನಾಯಕ್, ರಾಮ್ಸನ್ ಸ.ಪ್ರೌ.ಶಾಲೆ ಕಂಡ್ಲೂರು ಕುಂದಾಪುರ (611), 6.ಶೃದ್ಧಾ ಡಿ.ಎಸ್., ಸ.ಪ್ರೌ.ಶಾಲೆ ತೆಂಕನಿಡಿಯೂರು ಉಡುಪಿ (610), 7.ಸುಕನ್ಯಾ, ಸ.ಸಂಯುಕ್ತ ಪ್ರೌ.ಶಾಲೆ ಬೀಜಾಡಿ ಕೋಟೇಶ್ವರ (609), 8.ನಿಧಿ, ನೇಶನಲ್ ಪ.ಪೂ.ಕಾಲೇಜು ಬಾರಕೂರು (608).
ವಿಕಲಚೇತನರು: ಈ ಬಾರಿ ಜಿಲ್ಲೆಯಿಂದ ಒಟ್ಟು 43 ಮಂದಿ -25 ಮಂದಿ ಬಾಲಕರು ಹಾಗೂ 18 ಬಾಲಕಿಯರು- ವಿಕಲಚೇತನ, ವಿಶೇಷ ಮಕ್ಕಳು ಹಾಗೂ ಇತರ ಅಂಗವೈಕಲ್ಯದ ಮಕ್ಕಳು ಪರೀಕ್ಷೆ ಬರೆದಿದ್ದು, ಇವರಲ್ಲಿ 16 ಮಂದಿ ಬಾಲಕರು ಹಾಗೂ 10 ಮಂದಿ ಬಾಲಕಿಯರು ಉತ್ತೀರ್ಣರಾಗಿ ಶೇ.60 ಫಲಿತಾಂಶ ದಾಖಲಿಸಿದ್ದಾರೆ. ಶ್ರೇಯ ಎಸ್.ಪ್ರಭು 592 ಅಂಕಗಳನ್ನು, ರೂಪಾ 581, ಆಯಿಷಾ ರಹೀನಾ ವೌಲಾನಾ 549, ವಿಶಾಲ್ ಶೆಟ್ಟಿ 545 ಹಾಗೂ ಪ್ರಜ್ವಲ್ ಆಚಾರ್ಯ 526 ಅಂಕಗಳಿಸಿ ಉತ್ತೀರ್ಣರಾಗಿದ್ದಾರೆ ಎಂದು ಡಿಡಿಪಿಐ ದಿವಾಕರ ಶೆಟ್ಟಿ ತಿಳಿಸಿದ್ದಾರೆ.