×
Ad

ಉಡುಪಿ: ನಾಯರ್ ಕೆರೆಯ ಹಾಶಿಮಿ ಮಸೀದಿಯಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ

Update: 2017-05-15 15:59 IST

ಉಡುಪಿ, ಮೇ 15: ಬ್ರಹ್ಮಗಿರಿಯ ನಾಯರ್ ಕೆರೆಯ ಹಾಶಿಮಿ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆಯು ಸೋಮವಾರ ನೆರವೇರಿತು.

ಮಸೀದಿಯ ಮೌಲಾನ ಹಾಶಿಂ ಉಮ್ರಿ ನೇತೃತ್ವದಲ್ಲಿ ವಿಶೇಷ ನಮಾಝ್ ನಡೆಯಿತು. ಈ ಸಂದರ್ಭ ಮಾತನಾಡಿದ ಅವರು, ಪ್ರವಾದಿ (ಸ.ಅ.) ಯವರೂ ಕೂಡ ಮಳೆ ಬಾರದ ಸಂದರ್ಭಗಳಲ್ಲಿ ವಿಶೇಷ ನಮಾಝ್  ಗಳನ್ನು ನಿರ್ವಹಿಸಿ ಪ್ರಾರ್ಥಿಸುತ್ತಿದ್ದರು. ರಾಜ್ಯದಲ್ಲಿ ಭೀಕರ ಬರಗಾಲ ಕಾಣಿಸಿದ್ದು, ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಹೀಗಾಗಿ ಈ ವಿಶೇಷ ಪ್ರಾರ್ಥನೆಯನ್ನು ನಡೆಸಲಾಗುತ್ತಿದೆ ಎಂದರು.

ಈ ಸಂದರ್ಭ ಮಸೀದಿಯ ಅಧ್ಯಕ್ಷ ಝಕರಿಯಾ ಅಸ್ಸಾದಿ, ಉಡುಪಿ ನಗರಸಭೆ ಸದಸ್ಯ ಹಸನ್ ಅಜ್ಜರಕಾಡು, ಇಕ್ಬಾಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News