ಕುಂಜತ್ತೂರು: ಹೈಯರ್ ಸೆಕಂಡರಿ ಶಾಲೆಯಲ್ಲಿ ಅಭಿವೃದ್ದಿ ಸೆಮಿನಾರ್
ಮಂಜೇಶ್ವರ, ಮೇ 15: ಕೇರಳ ಸರಕಾರದ ಸಾರ್ವಜನಿಕ ಶಿಕ್ಷಣ ಸಂರಕ್ಷಣ ಯಜ್ಞದಂಗವಾಗಿ ಮುಂದಿನ ಐದು ವರ್ಷಗಳ ವರೆಗಿರುವ ರೂಪು ರೇಖೆಯನ್ನು ತಯಾರಿಸಿ ಅಲ್ಲಿರುವ ಯೋಜನೆಗಳನ್ನು ಕಾರ್ಯಗತಗೊಳಿಸುವ ಉದ್ದೇಶದಿಂದ ಕುಂಜತ್ತೂರು ಹೈಯರಿ ಸೆಕಂಡರಿ ಶಾಲೆಯಲ್ಲಿ ಶಾಲಾ ಅಭಿವೃದ್ದಿ ಸೆಮಿನಾರ್ ನಡೆಯಿತು.
ಕಾಸರಗೋಡು ಜಿಲ್ಲಾ ಪಂ. ಅಧ್ಯಕ್ಷ ಹರ್ಷಾದ್ ವರ್ಕಾಡಿ ಅಧ್ಯಕ್ಷತೆಯಲ್ಲಿ ನಡೆದ ಸೆಮಿನಾರನ್ನು ಕಾಸರಗೋಡು ಜಿಲ್ಲಾ ಪಂ. ಅಧ್ಯಕ್ಷ ಎಜಿಸಿ ಬಶೀರ್ ಉದ್ಘಾಟಿಸಿದರು.
ವೇದಿಕೆಯಲ್ಲಿ ಬ್ಲೋಕ್ ಪಂ. ಅಧ್ಯಕ್ಷ ಎ ಕೆ ಎಂ ಅಶ್ರಫ್, ಗ್ರಾ. ಪಂ. ಅಧ್ಯಕ್ಷ ಅಝೀಝ್ ಹಾಜಿ, ಬ್ಲೋಕ್ ಪಂ. ಆರೋಗ್ಯ ಹಾಗು ವಿದ್ಯಾಭ್ಯಾಸ ಅಭಿವೃದ್ಧಿ ಕ್ರ್ಯಾ ಸಮಿತಿಯ ಅಧ್ಯಕ್ಷ ಮುಸ್ತಫಾ ಉದ್ಯಾವರ, ಪಿಟಿಎ ಅಧ್ಯಕ್ಷ ಯು ಎಚ್ ಅಬ್ದುಲ್ ರಹ್ಮಾನ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ದುಲ್ ರಹ್ಮಾನ್ ಉದ್ಯಾವರ, ಕಾರ್ಯದರ್ಶಿ ದಯಾಕರ ಮಾಡ, ಜನಪ್ರತಿನಿಧಿಗಳಾದ ಬಿ ವಿ ರಾಜನ್, ಹರೀಶ್ಚಂದ್ರ ಮಂಜೇಶ್ವರ, ಪಿಟಿ ಎ ಉಪಾಧ್ಯಕ್ಷ ಅಬ್ದುಲ್ ಖಾದರ್, ಪ್ರಸನ್ನ ಟೀಚರ್ ಸೇರಿದಂತೆ ಇತರರು ಉಪಸ್ಥರಿದ್ದರು. ಪ್ರಾಂಶುಪಾಲ ಅಗಸ್ಟಿನ್ ಬರ್ನಾಡ್ ಸ್ವಾಗತಿಸಿ ಅಧ್ಯಾಪಕ ಶಿಶುಪಾಲನ್ ವಂದಿಸಿದರು.
1908 ರಲ್ಲಿ ಕಣ್ವತೀರ್ಥ ಎಲಿಮೆಂಟರಿ ಶಾಲೆಯಿಂದ 1958 ರಲ್ಲಿ ಅಪ್ಪರ್ ಪ್ರೈಮರಿಯಾಗಿ ಬಳಿಕ 1974 ಹಾಗೂ 1975 ರಲ್ಲಿ ಪ್ರೌಢಶಾಲೆಯಾಗಿ ಭರ್ತಿಯಾಗಿ 1977 ರಲ್ಲಿ ಎಸೆಸೆಲ್ಸಿ ಪ್ರಥಮ ತಂಡ ಹೊರ ಬಂದಿದೆ. ಬಳಿಕ 1981 ರಲ್ಲಿ ಶಾಲೆಯಲ್ಲಿ ವಿಎಚ್ಎಸ್ಇ ವಿಭಾಗ ಬೇರ್ಪಟ್ಟು ಪ್ರತ್ಯೇಕ ಶಾಲೆಯಾಗಿ ಕಾರ್ಯ ನಿರ್ವಹಿಸಿದೆ. ನಂತರ 1991ರಲ್ಲಿ ಈ ಶಾಲೆಗೆ ವಿ ಎಚ್ ಎಸ್ ಇ ವಿಭಾಗ ಸೇರಿಕೊಂಡಿದೆ.
ಸಾದಿಕ್ ತಂಙಳ್ ರಿಗೆ ಸನ್ಮಾನ
ಉದ್ಯಾವರ 10ನೆ ಮೈಲು ನಿವಾಸಿ ಪೂಕೋಯ ತಂಙಲ್ ರ ಪುತ್ರ ಸಾದಿಕ್ ತಂಙಳ್ ತಂಙಳ್ ರ ಸಮಾಜ ಸೇವೆಯನ್ನು ಗುರುತಿಸಿ ಕಾಸರಗೋಡು ಬೋವಿಕಾನ ಪರಿಸರದಲ್ಲಿ ಆರ್ ಟಿ ಒ ಹಾಗು ಪೊಲೀಸ್ ಇಲಾಖೆ ಜಂಟಿಯಾಗಿ ನಡೆಸಿದ ಟ್ರೊಮೋ ಕ್ಯಾರ್ ಎಂಬ ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಲಾಯಿತು.
ಕೊಳೆತ ಮೃತ ದೇಹಗಳನ್ನು ಆಸ್ಪತ್ರೆಗೆ ಸಾಗಿಸುವುದು, ಅಪಘಾತ ಸ್ಥಳಕ್ಕೆ ತೆರಳಿ ಸ್ವಂತ ಖರ್ಚಿನಲ್ಲೇ ಅಪಘಾತಕ್ಕೀಡಾದವರನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿರುವುದು ಮೊದಲಾದ ರೀತಿಯ ಸೇವೆಗಳಲ್ಲಿ ಇವರು ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.