ಭಟ್ಕಳ: ಸಿಡಿಲಿಗೆ ಮಹಿಳೆ ಬಲಿ; ಇಬ್ಬರಿಗೆ ಗಾಯ
Update: 2017-05-15 19:56 IST
ಭಟ್ಕಳ, ಮೇ 15: ಸಿಡಿಲಿನಿಂದ ಕೂಡಿದ ಮಳೆಗೆ ಓರ್ವ ಮಹಿಳೆ ಬಲಿಯಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೆಬಳೆ ಪಂಚಾಯತ್ ವ್ಯಾಪ್ತಿಯ ಫಿರ್ದೋಸ್ ನಗರದಲ್ಲಿ ಸಂಭವಿಸಿದೆ.
ಬಿಬಿ ಸಫಿಯಾ (22) ಮೃತರು ಎಂದು ಗುರುತಿಸಲಾಗಿದೆ. ಈ ಸಂದರ್ಭ ಮನೆಯಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ.
ಇಂದು ಬೆಳಗ್ಗೆ ಸಿಡಿಲಿನಿಂದ ಕೂಡಿದ ಭಾರೀ ಮಳೆ ಸುರಿಯುತ್ತಿದ್ದ ಸಂದರ್ಭ ತನ್ನ ಮೇಲೆ ವಿದ್ಯುತ್ ಸಂಚಾರ ಉಂಟಾದಂತಾಗಿ ನಂತರ ಅದು ತನ್ನ ಪುತ್ರಿಗೆ ಬಡಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟು, ಪುತ್ರ ಮುಬಾರಕ್ ಖಾನ್ ಹಾಗೂ ಮೊಮ್ಮಗ ಮುಹಮ್ಮದ್ ಖೈಫ್ ಸಿಡಿಲಿನ ಬಡಿತಕ್ಕೆ ಗಾಯಗೊಂಡಿರುವುದಾಗಿ ಮೃತರ ತಂದೆ ಅಮಾನುಲ್ಲಾ ಖಾನ್ ಮಾಧ್ಯಮಗಳಿಗೆ ಘಟನೆಯನ್ನು ವಿವರಿಸಿದ್ದಾರೆ.
ಮೃತ ಮಹಿಳೆಯನ್ನು ಶಿಕಾರಿಪುರದ ವ್ಯಕ್ತಿಯೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಎರಡು ದಿನಗಳ ಹಿಂದೆಯಷ್ಟೆ ಆಕೆ ತನ್ನ ತಾಯಿ ಮನೆಗೆ ಬಂದಿದ್ದು, ಎರಡು ತಿಂಗಳ ಗರ್ಭಿಣಿಯಾಗಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.