ರೋಹ್ಟಕ್ ಗ್ಯಾಂಗ್‌ರೇಪ್ ಪ್ರಕರಣದ ವಿಚಾರಣೆ ಕ್ಷಿಪ್ರ ನ್ಯಾಯಾಲಯದಲ್ಲಿ : ಮನೋಹರ್ ಖಟ್ಟರ್
Update: 2017-05-15 21:24 IST
ಹೊಸದಿಲ್ಲಿ, ಮೇ 15: ಇತ್ತೀಚೆಗೆ ನಡೆದ ರೋಹ್ಟಕ್ ಸಾಮೂಹಿಕ ಅತ್ಯಾಚಾರ ಪ್ರಕರಣದ ವಿಚಾರಣೆ ಕ್ಷಿಪ್ರ ನ್ಯಾಯಾಲಯದಲ್ಲಿ ನಡೆಯಲಿದೆ . ಅಪರಾಧಿಗಳನ್ನು ಶಿಕ್ಷಿಸದೆ ಬಿಡುವುದಿಲ್ಲ ಎಂದು ಹರ್ಯಾನ ಮುಖ್ಯಮಂತ್ರಿ ಮನೋಹರ್‌ಲಾಲ್ ಖಟ್ಟರ್ ತಿಳಿಸಿದ್ದಾರೆ.
ಹೊಸದಿಲ್ಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಖಟ್ಟರ್, ಇಂತಹ ಹೀನಾಯ ಕೃತ್ಯಗಳನ್ನು ಸಹಿಸಲಾಗದು ಎಂದು ತಿಳಿಸಿದರು. ಸೋನೆಪತ್ ನಗರದ 23ರ ಹರೆಯದ ಮಹಿಳೆಯ ಮೇಲೆ ಆಕೆಯ ಪ್ರೇಮಿ ಮತ್ತು ಇನ್ನೋರ್ವ ಸೇರಿ ಅತ್ಯಾಚಾರ ನಡೆಸಿದ್ದು ಬಳಿಕ ಆಕೆಯನ್ನು ಕೊಂದು ದೇಹದಿಂದ ಅಂಗಾಂಗಳನ್ನು ಕಿತ್ತೆಸೆದಿದ್ದರು. ಮೃತ ಮಹಿಳೆಯ ತಾಯಿ ನೀಡಿದ ದೂರಿನಂತೆ ಸುಮಿತ್ ಕುಮಾರ್ (ಮಹಿಳೆಯ ಪ್ರೇಮಿ) ಮತ್ತು ವಿಕಾಸ್ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದರು.