×
Ad

ಕರೂರು ಅಪಘಾತ ಪ್ರಕರಣ: ಸಂತ್ರಸ್ತ ಕುಟುಂಬಕ್ಕೆ ಸರಕಾರದ ಧನಸಹಾಯ ಮಂಜೂರು

Update: 2017-05-16 11:52 IST

ಕಾಸರಗೋಡು, ಮೇ 16: ತಮಿಳುನಾಡು ಕರೂರಿನಲ್ಲಿ ವಾಹನ ಅಪಘಾತದಲ್ಲಿ ಏಳು ಮಂದಿ ಮೃತಪಟ್ಟ ಕಯ್ಯಾರ್ ಮಂಡೆಕಾಪಿನ ಕುಟುಂಬಕ್ಕೆ ಕೇರಳ ಸರಕಾರ ಧನಸಹಾಯ ಮಂಜೂರುಗೊಳಿಸಿದೆ.

ಅಂತ್ಯ ಕ್ರಿಯೆಗೆ  70 ಸಾವಿರ ರೂ. ತುರ್ತಾಗಿ ಬಿಡುಗಡೆ ಮಾಡಿದ್ದು, ಅಪಘಾತದಲ್ಲಿ ಗಾಯಗೊಂಡು ಕರೂರು ಕಾವೇರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರ ಚಿಕಿತ್ಸೆಗಾಗಿ ಎರಡು ಲಕ್ಷ ರೂ.  ಬಿಡುಗಡೆ ಮಾಡಿದೆ.

ಮೃತರ ಮನೆಗೆ ಭೇಟಿ ನೀಡಿದ ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಅವರು ಮುಖ್ಯಮಂತ್ರಿಯವರನ್ನು  ಸಂಪರ್ಕಿಸಿ ಅನುದಾನ ಮಂಜೂರುಗೊಳಿಸಿದ್ದಾರೆ.

ಅನುದಾನ ಕುಟುಂಬಕ್ಕೆ ತಲಪಿಸಲು ಕ್ರಮ ತೆಗೆದುಕೊಂಳ್ಳುವಂತೆ ಕಂದಾಯ ಸಚಿವರು ಜಿಲ್ಲಾಧಿಕಾರಿಗೆ ಆದೇಶ ನೀಡಿದ್ದಾರೆ .

ಶನಿವಾರ ಮುಂಜಾನೆ ತಮಿಳುನಾಡಿನ ಕರೂರಿನಲ್ಲಿ ಸ್ಕಾರ್ಪಿಯೋ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ  ಒಂದೇ ಕುಟುಂಬದ ಏಳು ಮಂದಿ ಮೃತಪಟ್ಟು, ನಾಲ್ವರು ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News