ಡೈನೊಸಾರ್‌ಗಳ ನಾಶಕ್ಕೆ ಕಾರಣವಾದ 'ಉಲ್ಕೆ' 30 ಸೆಕೆಂಡ್ ಮೊದಲು ಭೂಮಿಗೆ ಬಿದ್ದಿದ್ದರೆ ಏನಾಗುತ್ತಿತ್ತು?
ಲಂಡನ್,ಮೇ 16: ಡೈನೊಸಾರ್‌ಗಳ ಸರ್ವನಾಶಕ್ಕೆ ಕಾರಣವಾಗಿದ್ದ ಉಲ್ಕೆಗಳು ಒಂದುವೇಳೆ 30 ಸೆಕೆಂಡ್ ಬೇಗನೆ ಬಿದ್ದಿದ್ದರೆಅಥವಾ ತಡವಾಗಿ ಬಿದ್ದಿದ್ದರೆ ಆ ಭೀಕರ ಜೀವಿಗಳು ಈಗಲೂ ಭೂಮಿಯಲ್ಲಿ ಉಳಿಯುತ್ತಿದ್ದವು ಎಂದು ಬಿಬಿಸಿ ತಯಾರಿಸಿದ ಡಾಕ್ಯುಮೆಂಟರಿಯಲ್ಲಿ ವಿವರಿಸಲಾಗಿದೆ. ದ ಡೈನೊಸಾರ್ಸ್ ಡೆಡ್ ಎನ್ನುವ ಹೆಸರಿನ ಡಾಕ್ಯುಮೆಂಟರಿ ಸೋಮವಾರ ಪ್ರಸಾರವಾಗಿತ್ತು. ಇದರಲ್ಲಿ ವಿಜ್ಞಾನದ ಈ ಹೊಸ ಶೋಧವನ್ನು ಬಹಿರಂಗಪಡಿಸಲಾಗಿದೆ.
ದಕ್ಷಿಣ ಅಮೆರಿಕದ ಮೆಕ್ಸಿಕೊದ ಯುಕಾಟ್ಟನ್ ದ್ವೀಪದಲ್ಲಿ ಡೈನೋಸಾರ್‌ಗಳ ಪತನಕ್ಕೆ ಕಾರಣವಾದ ಉಲ್ಕೆಗಳು 66 ದಶಲಕ್ಷ ವರ್ಷಗಳ ಹಿಂದೆ ಬಿದ್ದಿದ್ದವು ಎಂದು ವಿಜ್ಞಾನಿಗಳ ಒಂದು ಗುಂಪು ಭಾವಿಸುತ್ತಿದೆ. ಅಂದು ಭೂಮಿಗೆ ಬಿದ್ದಿದ್ದ ಉಲ್ಕೆಗಳು ಬಂಡೆಗಳನ್ನು ಕೂಡಾ ಪುಡಿಗುಟ್ಟಿದ್ದವು. ಅದರಿಂದ ಉಂಟಾದ ಧೂಳು ಸೂರ್ಯಕಿರಣಗಳು ಭೂಮಿಗೆ ಬೀಳದಷ್ಟು ದಟ್ಟವಾಗಿ ವಾತಾವರಣವನ್ನು ಸುದೀರ್ಘಕಾಲ ಆವರಿಸಿಕೊಂಡಿತ್ತು. ಅಂದು ಭೂಮಿಯಲ್ಲಿ ಜೀವಿಸಿದ್ದ ಡೈನೊಸಾರ್‌ಗಳು ಮಾತ್ರವಲ್ಲ ಎಲ್ಲ ಜೀವಿವರ್ಗಗಳ ನಾಶಕ್ಕೂ ಕಾರಣವಾಗಿತ್ತು ಎಂದು ಲಂಡನ್ ಇಂಪೀರಿಯಲ್ ಕಾಲೇಜಿನ ಪ್ರೊಫೆಸರ್ ಜೊಅನ್ನಾ ಮೋರ್ಗನ್ ಹೇಳುತ್ತಾರೆ. ಈ ಉಲ್ಕೆಗಳು ಅಂಟ್ಲಾಟಿಕ್‌ಮತ್ತು ಪೆಸಿಫಿಕ್ ಸಮುದ್ರಕ್ಕೆ ಬೀಳುತ್ತಿದ್ದರೆ ಡೈನೊಸಾರ್ ಮತ್ತು ಅಂದಿನ ಇತರ ಪ್ರಾಣಿಗಳ ನಾಶ ಸಂಭವಿಸುತ್ತಿರಲಿಲ್ಲ ಎಂದು ಡಾಕ್ಯುಮೆಂಟರಿಯಲ್ಲಿ ತಿಳಿಸಲಾಗಿದೆ.