ಬ್ಯಾಟರಿ ಕಳವು
Update: 2017-05-16 20:42 IST
ಮಂಗಳೂರು, ಮೇ 16: ಕಾವೂರು ಮುಲ್ಲಕಾಡಿನಲ್ಲಿರುವ ಎಲ್‌ಜೆ ಸೌಂಡ್ಸ್ ಆ್ಯಂಡ್ ಲೈಟ್ಸ್‌ನ 6 ಜನರೇಟರ್‌ಗಳ ಬ್ಯಾಟರಿಗಳನ್ನು ಕಳವು ಮಾಡಿದ ಬಗ್ಗೆ ಕಾವೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಎಲ್‌ಜೆ ಸೌಂಡ್ಸ್ ಆ್ಯಂಡ್ ಲೈಟ್ಸ್ ಅಂಗಡಿಗೆ ಮಾಲಕ ಬೀಗ ಹಾಕಿ ಹೋಗಿದ್ದು, ಮಂಗಳವಾರ ಬೆಳಗ್ಗೆ ಬ್ಯಾಟರಿ ಕಳವಾಗಿರುವುದು ಬೆಳಕಿಗೆ ಬಂದಿದೆ. ಇದರಿಂದ ಸುಮಾರು 30 ಸಾವಿರ ರೂ. ನಷ್ಟವಾಗಿದೆ ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.