ನೋಟು ರದ್ದತಿ ಬಳಿಕ 91 ಲ. ಜನರು ತೆರಿಗೆ ಬಲೆಯಲ್ಲಿ : ಜೇಟ್ಲಿ
Update: 2017-05-16 21:07 IST
ಹೊಸದಿಲ್ಲಿ,ಮೇ 16: ನೋಟು ರದ್ದತಿಯ ಬಳಿಕ 91 ಲಕ್ಷ ಜನರು ತೆರಿಗೆ ಜಾಲದಲ್ಲಿ ಸೇರ್ಪಡೆಗೊಂಡಿದ್ದಾರೆ ಎಂದು ಕೇಂದ್ರ ವಿತ್ತಸಚಿವ ಅರುಣ್ ಜೇಟ್ಲಿ ಅವರು ಮಂಗಳವಾರ ಇಲ್ಲಿ ತಿಳಿಸಿದರು.
‘ಆಪರೇಷನ್ ಕ್ಲೀನ್ ಮನಿ’ ಕುರಿತು ನೂತನ ವೆಬ್‌ಸೈಟ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ನೋಟು ರದ್ದತಿಯ ಪರಿಣಾಮವಾಗಿ ಡಿಜಿಟೈಸೇಷನ್‌ನತ್ತ ಒಲವು ಹೆಚ್ಚುತ್ತಿದೆ, ತೆರಿಗೆದಾತರ ಸಂಖ್ಯೆ ಹೆಚ್ಚುತ್ತಿದೆ ಮತ್ತು ನಗದು ವಹಿವಾಟಿನ ಬಗ್ಗೆ ಭೀತಿ ಮೂಡಿರುವುದರಿಂದ ತೆರಿಗೆ ಆದಾಯದಲ್ಲಿಯೂ ಏರಿಕೆಯಾಗಿದೆ ಎಂದರು. ತೆರಿಗೆ ರಿಟರ್ನ್ ಸಲ್ಲಿಕೆಯಲ್ಲಿ ಇನ್ನಷ್ಟು ಏರಿಕೆಯನ್ನು ತಾನು ನಿರೀಕ್ಷಿಸಿದ್ದೇನೆ ಎಂದರು.