ಸರಕಾರಿ ಕಾರ್ಯಕ್ರಮದಲ್ಲಿ ‘ಆಝಾದಿ’ ಘೋಷಣೆ : ಮೆಹಬೂಬಗೆ ಮುಜುಗರ
Update: 2017-05-16 21:11 IST
ಶ್ರೀನಗರ,ಮೇ 16: ಜಮ್ಮು-ಕಾಶ್ಮೀರ ಗ್ರಾಮೀಣಾಭಿವೃದ್ಧಿ ಇಲಾಖೆಯು ಮಂಗಳವಾರ ಇಲ್ಲಿ ಆಯೋಜಿಸಿದ್ದ ಕಣಿವೆಯ ಸ್ವಸಹಾಯ ಗುಂಪುಗಳ ಸದಸ್ಯೆಯರೊಂದಿಗೆ ಮುಖ್ಯಮಂತ್ರಿಗಳ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಲವಾರು ಮಹಿಳೆಯರು ಮೋಸದಿಂದ ತಾವು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಲಾಗಿದೆ ಎಂದು ಆರೋಪಿಸಿ ಸಮಾವೇಶ ಸ್ಥಳದಿಂದ ಹೊರಗೆ ನಡೆದಿದ್ದು, ಇದರಿಂದಾಗಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ಮಜುಗರವನ್ನು ಅನುಭವಿಸುವಂತಾ ಯಿತು.
ಮಹಿಳೆಯರು ಕಾರ್ಯಕ್ರಮದಿಂದ ಹೊರನಡೆಯುವ ಮುನ್ನ ಸ್ವಾತಂತ್ರಪರ ಘೋಷಣೆಗಳನ್ನು ಕೂಗಿದ್ದರಿಂದ ಭದ್ರತಾ ಸಿಬ್ಬಂದಿಗಳು ಅವರನ್ನು ತರಾತುರಿಯಿಂದ ಅಲ್ಲಿಂದ ತೆರವುಗೊಳಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಕೆಲವು ಮಹಿಳೆಯರು ಖುರ್ಚಿಗಳನ್ನೂ ಎತ್ತಿ ಎಸೆದಿದ್ದರು. ಬೆಳಿಗ್ಗೆ ಇತ್ತೀಚಿಗೆ ಹಿಂಸಾಚಾರ ಹೆಚ್ಚಿರುವ ದಕ್ಷಿಣ ಕಾಶ್ಮೀರದ ಕಾರ್ಯಕ್ರಮ ಸ್ಥಳದ ಹೊರಗೆ ಆಝಾದಿ ಘೋಷಣೆಗಳನ್ನು ಕೂಗುವುದರೊಂದಿಗೆ ತೊಂದರೆ ಆರಂಭಗೊಂಡಿತ್ತು.