ಅಡ್ಯಾರ್: ಮೇ 18ರಂದು ವಿವಿಧ ಯೋಜನೆಗಳ ಜಿಲ್ಲಾ ಮಟ್ಟದ ಕಾರ್ಯಾಗಾರ

Update: 2017-05-16 17:00 GMT

ಮಂಗಳೂರು, ಮೇ 16: ಕೇಂದ್ರ ಸರಕಾರದ ವಿವಿಧ ಯೋಜನೆಗಳ ಬಗ್ಗೆ ದ.ಕ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಮೇ 18ರಂದು ಬೆಳಗ್ಗೆ 11ಗಂಟೆಗೆ ಅಡ್ಯಾರಿನ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಭಾರತ ಸರಕಾರದ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಹಾಗೂ ಸ್ಟಾರ್ಟ್ ಅಫ್ ಮತ್ತು ಸ್ಟಾಂಡ್ ಅಫ್ ಕುರಿತು ಮಾಹಿತಿ, ಫಲಾನುಭವಿಗಳ ಕಾರ್ಯಾಗಾರವನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಉದ್ಘಾಟಿಸಲಿದ್ದಾರೆ. ಕೇಂದ್ರ ವಿತ್ತ ಸಚಿವ, ಕಾರ್ಪೋರೇಟ್ ವ್ಯವಹಾರ ಸಚಿವ ಅರ್ಜುನ್ ರಾಮ್ ಮೇಘಾವಲ್ ಯೋಜನೆಯನ್ನು ಹಸ್ತಾಂತರ ಮಾಡಲಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
 

ಜಿಲ್ಲೆಯಲ್ಲಿ ಮುದ್ರಾ ಯೋಜನೆಯಡಿ 50,706 ಮಂದಿ ಫಲಾನುಭವಿಗಳು ಸಾಲ ಪಡೆದುಕೊಂಡಿದ್ದು 702.71 ಕೋಟಿ ರೂ. ಸಾಲ ಬಿಡುಗಡೆಯಾಗಿದೆ. ಪ್ರಧಾನ ಮಂತ್ರಿ ಜನ ಧನ ಯೋಜನೆಯಡಿ ಒಟ್ಟು 3,68,562 ಖಾತೆಗಳನ್ನು ತೆರೆಯಲಾಗಿದ್ದು 2,77,401 ರೂಪೇ ಕಾರ್ಡ್‌ ಗಳನ್ನು ನೀಡಲಾಗಿದೆ. ಸ್ಪಾರ್ಟ್ ಆಫ್ ಮತ್ತು ಸ್ಟಾಂಡ್ ಆಫ್ ಇಂಡಿಯಾ ಯೋಜನೆಯಡಿ ಮಂಜೂರಾದ 80 ಪ್ರಸ್ತಾವನೆಗಳಲ್ಲಿ 15.54 ಕೋಟಿ ಸಾಲ ಮಂಜೂರಾಗಿದೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ಭಿಮಾ ಯೋಜನೆ ಯಡಿ 1,23,506 ಖಾತೆ ತೆರೆಯಲಾಗಿದ್ದು 218 ಪ್ರಕರಣಗಳಲ್ಲಿ 4.36 ಲಕ್ಷ ರೂ. ಮಂಜೂರಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ಸುರಕ್ಷಾ ಭಿಮಾ ಯೋಜನೆಯಲ್ಲಿ ಒಟ್ಟು 3,46,220 ಖಾತೆ ತೆರೆಯಲಾಗಿದೆ. ಈ ಪೈಕಿ ಒಟ್ಟು 111 ಪ್ರಕರಣಗಳಲ್ಲಿ 220 ಲಕ್ಷಗಳು ಮಂಜೂರಾಗಿದೆ. ಅಟಲ್ ಪಿಂಚಣಿ ಯೋಜನೆಯಡಿ 11,496 ಖಾತೆ ತೆರೆಯಲಾಗಿದೆ. ಪ್ರಧಾನ ಮಂತ್ರಿ ಉದ್ಯೋಗ ಸೃಷ್ಠಿ ಯೋಜನೆಯಡಿ 669 ಫಲಾನುಭವಿಗಳನ್ನು ಗುರುತಿಸಿ ರೂ 25,30,42,000 ಮಾರ್ಜಿನ್ ಮನಿ ನೀಡಲಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News