×
Ad

ಝೀನತ್ ಭಕ್ಷ್: ಮೇ 18ರಂದು ಕಟ್ಟಡ ಉದ್ಘಾಟನೆ, ಸನದು ದಾನ ಕಾರ್ಯಕ್ರಮ

Update: 2017-05-16 22:38 IST

ಮಂಗಳೂರು, ಮೇ 16: ನಗರದ ಬಂದರ್ ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿ ಅಧೀನಕ್ಕೆ ಒಳಪಟ್ಟ ಜಲಾಲ್ ಮಸ್ತಾನ್ ಮುಹಮ್ಮದ್ ಮೌಲಾ ಹಿಪ್‌ಲುಲ್ ಖುರಾನ್ ಹಾಗೂ ಅರೆಬಿಕ್ ಕಾಲೇಜಿನ ಕಟ್ಟಡ ಉದ್ಘಾಟನೆ ಹಾಗೂ ಖುರಾನ್ ಕಂಠಪಾಠ ಪೂರ್ತಿಗೊಳಿಸಿದ 6 ವಿದ್ಯಾರ್ಥಿಗಳಿಗೆ ಹಾಫಿಲ್ ಬಿರುದು ನೀಡಿ ಸನ್ಮಾನಿಸುವ  ಕಾರ್ಯಕ್ರಮ ಮೇ 18ರಂದು ಮಧ್ಯಾಹ್ನ ನಡೆಯಲಿದೆ.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ದ.ಕ ಜಿಲ್ಲಾ ಖಾಝಿ ಅಲ್‌ ಹಾಜ್‌ ತ್ವಾಖಾ ಅಹಮ್ಮದ್ ಮುಸ್ಲಿಯಾರ್ ದುವಾದೊಂದಿಗೆ ನೆರವೇರಿ ಸಲಿದ್ದಾರೆ.

ಅಧ್ಯಕ್ಷತೆಯನ್ನು ಝೀನತ್ ಭಕ್ಷ ಅಧ್ಯಕ್ಷ, ಈದ್ಗಾ ಜುಮಾ ಮಸೀದಿ ಅಧ್ಯಕ್ಷ ಹಾಜಿ.ವೈ.ಅಬ್ದುಲ್ಲಾ ಕುಂಞ ವಹಿಸಲಿದ್ದಾರೆ. ಸಮಾರಂಭದಲ್ಲಿ ಟ್ರಸ್ಟಿಗಳಾದ ಹಾಜಿ ಮುಹಮ್ಮದ್ ಹನೀಫ್, ಸೈಯದ್ ಅಹ್ಮದ್ ಭಾಷಾ ತಂಙಳ್, ಮಸೀದಿಯ ಖತೀಬ್ ವಿ.ಕೆ.ಸದಕತುಲ್ಲಾ ಪೈಝಿ, ಹಿಫ್‌ಲುಲ್ ಖುರಾನ್ ಕಾಲೇಜಿನ ಪ್ರಾಂಶುಪಾಲ ಅಮೀನ್ ಹುದವಿ, ಉಸ್ತಾದ್ ಶಕೀಲ್ ಅಹಮ್ಮದ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿ ಹಾಗೂ ಈದ್ಗಾ ಮಸೀದಿಯ ಕೋಶಾಧಿಕಾರಿ ಎಸ್.ಎಂ.ರಶೀದ್ ಹಾಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News