ಬಾವಿಗೆ ಬಿದ್ದು ಮೃತ್ಯು
Update: 2017-05-16 22:53 IST
ಹಿರಿಯಡ್ಕ, ಮೇ 16: ಕುರುಡರೊಬ್ಬರು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತ ಪಟ್ಟ ಘಟನೆ ಕಣಜಾರು ಗ್ರಾಮದ ಪೆಲತ್ತೂರು ಕಟ್ಟದ ಗುರಿ ಎಂಬಲ್ಲಿ ನಡೆದಿದೆ.
ಮೃತರನ್ನು ಪೆಲತ್ತೂರು ಕಟ್ಟದಗುರಿ ನಿವಾಸಿ ಸುಧಾಕರ ನಾಯಕ್ (42) ಎಂದು ಗುರುತಿಸಲಾಗಿದೆ. ಇವರಿಗೆ ಕಣ್ಣು ಕಾಣಿಸದೇ ಇದ್ದು, ಆವರಣವಿಲ್ಲದ ಬಾವಿಯ ಬಳಿ ನೀರನ್ನು ಕೊಡಪಾನದಲ್ಲಿ ಮನೆಗೆ ತರುತ್ತಿರುವಾಗ ಆಯ ತಪ್ಪಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.