ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಮತದಾನ

Update: 2017-05-16 17:37 GMT

ಮೂಡುಬಿದಿರೆ, ಮೇ 16: ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಪದಾಧಿಕಾರಿಗಳ ಹುದ್ದೆಗೆ ಮೇ 17ರಂದು ಮೂಡುಬಿದಿರೆಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮತದಾನ ನಡೆಯಲಿದೆ.

ಒಟ್ಟು 2,185 ಸದಸ್ಯ ಮತದಾರರಿದ್ದು, ಮುಲ್ಕಿ ಹೋಬಳಿಯ ಯುವಕಾಂಗ್ರೆಸ್ ಸದಸ್ಯರೂ ಮೂಡುಬಿದಿರೆಗೆ ಆಗಮಿಸಿ ಮತಚಲಾವಣೆ ಮಾಡಬೇಕಿದೆ. ಒಬ್ಬೊಬ್ಬ ಸದಸ್ಯರಿಗೆ 5 ಮತದಾನದ ಅವಕಾಶವಿದ್ದು, ಅದರಲ್ಲಿ ಯುವಕಾಂಗ್ರೆಸ್‌ನ ರಾಜ್ಯ ಅಧ್ಯಕ್ಷ, ರಾಜ್ಯ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಅಧ್ಯಕ್ಷ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಹುದ್ದೆಗೆ ತಮ್ಮ ಅಭ್ಯರ್ಥಿಗಳಿಗೆ ಮತಚಲಾವಣೆ ಮಾಡಲಿದ್ದಾರೆ.

ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ನಾಲ್ಕು ಮಂದಿ ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದು, ಅತಿ ಹೆಚ್ಚು ಮತ ಪಡೆದವರು ಅಧ್ಯಕ್ಷ, ನಂತರ ಸ್ಥಾನಗಳಲ್ಲಿ ಮತಪಡೆದವರು ಕ್ರಮವಾಗಿ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಯಾಗಿ ಆಯ್ಕೆಯಾಗಲಿದ್ದಾರೆ. ಅಧ್ಯಕ್ಷ ಹುದ್ದೆಯ ಆಕಾಂಕ್ಷಿಗಳಾಗಿ ಚಂದ್ರಹಾಸ ಸನಿಲ್, ಸರ್ಫರಾಝ್ ನವಾಝ್, ಮುಸ್ತಫಾ ಮೂಡುಶೆಡ್ಡೆ, ಶ್ರುತಿ ಮುಲ್ಕಿ ಸ್ಪರ್ಧೆಯಲ್ಲಿದ್ದಾರೆ.

ಮತದಾನ ಬೆಳಗ್ಗೆ 8 ಗಂಟೆಯಿಂದ ಆರಂಭಗೊಂಡು ಮಧ್ಯಾಹ್ನ 3 ಗಂಟೆಯವರೆಗೆ ನಡೆಯಲಿದ್ದು, ಪಕ್ಷದ ವತಿಯಿಂದ ಆಗಮಿಸುವ 4 ಮಂದಿ ಚುನಾವಣಾ ಅಧಿಕಾರಿಗಳು ಮತದಾನದ ಪ್ರಕ್ರಿಯೆ ನಡೆಸಿಕೊಡಲಿದ್ದಾರೆ.

ಬ್ಯಾಲೆಟ್ ಪೇಪರ್ ಮೂಲಕ ಮತದಾನ ನಡೆಯಲಿದ್ದು, ಒಬ್ಬೊಬ್ಬ ಮತದಾರನಿಗೂ 5 ಬ್ಯಾಲೆಟ್ ಪೇಪರ್ ಸಿಗುತ್ತದೆ. ಅದರಲ್ಲಿ ತಮ್ಮ ನಾಯಕರ ಹೆಸರು ಮತ್ತು ಚಿಹ್ನೆಯ ಆಧಾರದಲ್ಲಿ ಮೊಹರು ಹಾಕುವ ಮೂಲಕ ಮತದಾನ ನಡೆಯಲಿದೆ. ಮೇ 19ರಂದು ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮತ ಎಣಿಕೆ ನಡೆಯಲಿದ್ದು, ವಿವಿಧ ಪದಾಧಿಕಾರಿಗಳ ಘೋಷಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News