ತಟ ರಕ್ಷಣಾ ನೌಕೆಯಿಂದ ಚೀನಾ ಸಿಬ್ಬಂದಿಯ ರಕ್ಷಣೆ

Update: 2017-05-16 17:44 GMT

ಮಂಗಳೂರು, ಮೇ 16: ನಗರದಿಂದ ಸುಮಾರು 25 ಕಿ.ಮೀ. ದೂರದ ಸಮುದ್ರದಲ್ಲಿ ಮೋಟಾರ್ ಟ್ಯಾಂಕರ್ ಸೀ ಡ್ರಾಗನ್ ಎಂಬ ಹಡಗಿನಲ್ಲಿ ಅಪಾಯದಲ್ಲಿದ್ದ ಚೀನಾದ ಸಿಬ್ಬಂದಿ 31ರ ಹರೆಯದ ಹಾಂಗ್ ಜಿಯಾಂಗ್ ಎಂಬವರನ್ನು ಇಂದು ಬೆಳಗ್ಗಿನ ಜಾವ ಭಾರತೀಯ ತಟ ರಕ್ಷಣಾ ಪಡೆಯ ಸಾವಿತ್ರಿ ಭಾಯಿ ಫುಲೆ ಹಡಗಿನ ಮೂಲಕ ರಕ್ಷಿಸಲಾಗಿದೆ.

ಸಿಂಗಾಪುರದಿಂದ ಫುಜೈರಾಕ್ಕೆ ತೆರಳುತ್ತಿದ್ದ 230 ಮೀಟರ್ ಉದ್ದದ ಎಲ್‌ಪಿಜಿ ಸಾಗಿಸುವ ಲೈಬೀರಿಯಾ ನೋಂದಣಿ ಹೊಂದಿದ ಎಂಟಿಸೀ ಡ್ರಾಗನ್ ಹಡಗಿನಲ್ಲಿದ್ದ ಹಾಂಗ್ ಜಿಯಾಂಗ್ ಬಲ ಕೈಯ ತೊಂದರೆಗೆ ಸಿಲುಕಿದ್ದರು. ಕರಾವಳಿ ತಟ ರಕ್ಷಣಾ ಪಡೆಯ ಕರ್ನಾಟಕ ಮುಖ್ಯ ಕಚೇರಿಗೆ ಈ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಬೆಳಗ್ಗೆ ಭಾರತೀಯ ಕರಾವಳಿ ತಟ ರಕ್ಷಣಾ ಪಡೆಯ ಸಾವಿತ್ರಿ ಭಾಯಿ ಫುಲೆ ಹಡಗನ್ನು ರಕ್ಷಣೆಗಾಗಿ ಕಳುಹಿಸಲಾಯಿತು.

ಕಮಾಂಡೆಂಟ್ ಮನಿಶ್ ಕುಮಾರ್ ನೇತೃತ್ವದಲ್ಲಿ ಹಾಂಗ್ ಜಿಯಾಂಗ್‌ ರವರಿಗೆ ಪ್ರಥಮ ಚಿಕಿತ್ಸೆಯನ್ನು ಒದಗಿಸಿ, ಅವರನ್ನು ಹಡಗಿನಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಕರೆತಂದು ಶಿಪ್ಪಿಂಗ್ ಏಜೆಂಟ್‌ಗೆ ಹಸ್ತಾಂತರಿಸುವ ಮೂಲಕ ಗಾಯಾಳು ಚೀನಾ ಪ್ರಜೆಗೆ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News