×
Ad

ಅಜ್ಜರಕಾಡಿನಲ್ಲಿ ಮೃತ್ಯುವಿಗೆ ಆಹ್ವಾನ ನೀಡುತ್ತಿದೆ ಪಾಳುಬಿದ್ದಿರುವ ಸರಕಾರಿ ಬಾವಿ

Update: 2017-05-17 12:46 IST

ಉಡುಪಿ, ಮೇ 17: ನಗರಸಭೆಯ ಅಜ್ಜರಕಾಡು ವಾರ್ಡಿನ ಕಾರ್ಯವ್ಯಾಪ್ತಿಗೆ ಒಳಪಟ್ಟ, ಕಿತ್ತೂರು ಚೆನ್ನಮ್ಮ ಮಾರ್ಗದ ಕಾರ್ಯನಿರ್ವಾಹಕರ ಇಂಜಿನಿಯರ್ ಕಚೇರಿ ಆವರಣ ಗೋಡೆಯ ಮುಂಭಾಗದಲ್ಲಿರುವ ಸರಕಾರಿ ಬಾವಿ ದುಸ್ಥಿತಿಯಲ್ಲಿದ್ದು, ದುರಂತಗಳಿಗೆ ಆಹ್ವಾನ ನೀಡುವಂತಿದೆ.

ಕೆಂಪು ಕಲ್ಲು ಬಳಸಿ ನಿರ್ಮಿಸಲಾಗಿರುವ ಈ ದೊಡ್ಡ ಬಾವಿ ಇದೀಗ ಕಸಕಡ್ಡಿಗಳಿಂದ ತುಂಬಿ ಪಾಳುಬಿದ್ದಿದೆ. ಇದರ ಆವರಣ ಗೋಡೆ ಕುಸಿದಿದ್ದು, ಮಳೆಗಾಲದಲ್ಲಿ ಮೃತ್ಯುಕೂಪವಾಗುವ ಸಾಧ್ಯತೆ ಇದೆ. ಅದೇ ರೀತಿ ಸಾಕುಪ್ರಾಣಿಗಳ ಪಾಲಿಗೆ ಅಪಾಯಕಾರಿಯಾಗಬಹುದು.

 ಇದೇ ಬಾವಿಯ ಹೂಳೆತ್ತಿ ಸ್ವಚ್ಛಗೊಳಿಸಿದರೆ ಇದು ಮತ್ತೆ ನೀರಿನ ಆಗರವಾಗಬಹುದು. ಈ ನಿಟ್ಟಿನಲ್ಲಿ ನಗರಾಡಳಿತ, ಜಿಲ್ಲಾಡಳಿತವು ಗಮನಹರಿಸಿ ಜಲಮೂಲವನ್ನು ಸಾರ್ವಜನಿಕರಿಗೆ ಉಪಯೋಗಕ್ಕೆ ಬರುವಂತೆ ದುರಸ್ತಿಗೊಳಿಸುವಂತೆ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ ಮೇಸ್ತ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News