ಟ್ಯಾಲೆಂಟ್: ವಿವಿಧ ಸವಲತ್ತುಗಳ ವಿತರಣೆ
ಮಂಗಳೂರು, ಮೇ 17: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಉಚಿತ ಹೊಲಿಗೆ ಯಂತ್ರಗಳು, ಗಾಲಿ ಕುರ್ಚಿಗಳು ಮತ್ತು ತಳ್ಳುವ ಗಾಡಿ ಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸುವ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಅಬ್ದುಲ್ ಲತೀಫ್ ಮದನಿ ಉದ್ಘಾಟಿಸಿದರು.
ಹೊಲಿಗೆ ಯಂತ್ರಗಳನ್ನು ಮತ್ತು ಗಾಲಿಕುರ್ಚಿಗಳನ್ನು ಪ್ರಾಯೋಜಿಸಿದ ಉದ್ಯಮಿ ಮುಬೀನ್ ಜುಬೈಲ್ ರವರ ಪರವಾಗಿ ಅವರ ತಂದೆ ಉಸ್ಮಾನ್ ಕೃಷ್ಣಾಪುರ ಫಲಾನುಭವಿಗಳಿಗೆ ವಿತರಿಸಿದರು.
ಮುಖ್ಯ ಅತಿಥಿಗಳಾಗಿ ನೂರ್ ಮುಹಮ್ಮದ್, ಯೆನ್‌ಮಾರ್ಕ್ ಬಿಲ್ಡರ್ಸ್, ನೌಷಾದ್ ಹಾಜಿ ಸೂರಲ್ಪಾಡಿ, ನಂಡೆ ಪೆಂಙಳ್ ಅಭಿಯಾನದ ಅಧ್ಯಕ್ಷ, ಇಂಜಿನಿಯರ್ ಮುಸ್ತಫಾ ಅಡ್ಡೂರು, ಶಾಫಿ ಮೂಲರಪಟ್ಟ, PWD ಕಂಟ್ರಾಕ್ಟರ್ ಜುನೈದ್, ಹಿಂದುಸ್ತಾನ್ ಟಿಂಬರ್ಸ್ ಉಡುಪಿ, ಅಸ್ಗರ್ ಬೆಳುವಾಯಿ, ಇನ್ನೋವೇಟಿವ್ ಕಾಂಸೆಪ್ಟ್, ಸುಲೈಮಾನ್ ಶೇಖ್ ಬೆಳುವಾಯಿ, ಟಿ.ಆರ್.ಎಫ್ ಸಲಹೆಗಾರ ಮೊದಲಾದವರು ಉಪಸ್ಥಿತರಿದ್ದರು.
ಟಿ.ಆರ್.ಎಫ್ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಟಿ.ಆರ್.ಎಫ್ ಸದಸ್ಯ ಅಬ್ದುಲ್ ಮಜೀದ್ ತುಂಬೆ ಸ್ವಾಗತಿಸಿದರು. ಟಿ.ಆರ್.ಎಫ್ ಅಧ್ಯಕ್ಷ ರಿಯಾರ್ ಕಣ್ಣೂರು ಪ್ರಸ್ತಾವನೆಗೈದರು.
ಕಾರ್ಯಕ್ರಮ ಸಂಯೋಜಕ ಅಸ್ಪರ್ ಹುಸೈನ್ ವಂದಿಸಿದರು. ಟಿ.ಆರ್.ಎಫ್ ಪ್ರಧಾನ ಕಾರ್ಯದರ್ಶಿ ಡಿ.ಅಬ್ದುಲ್ ಹಮೀದ್ ಕಣ್ಣೂರು ಫಲಾನುಭವಿಗಳ ಪಟ್ಟಿ ವಾಚಿಸಿದರು. ಟಿ.ಆರ್.ಎಫ್ ಸಲಹೆಗಾರ ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.