ತೊಕ್ಕೊಟ್ಟು: ಮನೆಯೊಳಗೆ ನುಗ್ಗಿದ ಲಾರಿ; ಮಹಿಳೆಗೆ ಗಾಯ

Update: 2017-05-17 12:59 GMT

ಉಳ್ಳಾಲ, ಮೇ 17: ತೊಕ್ಕೊಟ್ಟು ಸಮೀಪದ ಸೇವಂತಿಗುಡ್ಡೆ ಎಂಬಲ್ಲಿ ಲಾರಿಯೊಂದು ನಿಯಂತ್ರಣ ತಪ್ಪಿ ಮನೆಯೊಂದಕ್ಕೆ ನುಗ್ಗಿದ ಘಟನೆ ನಡೆದಿದ್ದು, ಘಟನೆಯಿಂದ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ.

ತೊಕ್ಕೊಟ್ಟು ಸಮೀಪದ ಸೇವಂತಿಗುಡ್ಡೆ ಎಂಬಲ್ಲಿಯ ರಾಜೇಂದ್ರ ಎಂಬವರ ಮನೆಗೆ ಟಿಪ್ಪರ್ ಲಾರಿಯೊಂದು ನಿಯಂತ್ರಣ ತಪ್ಪಿ ನುಗ್ಗಿದ್ದು ಇದರಿಂದ ಮನೆಯು ಹಾನಿಗೀಡಾಗಿದೆ. ಅಲ್ಲದೆ ಈ ಸಂದರ್ಭ ಮನೆಯೊಳಗಿದ್ದ ಲಲಿತಾ ಎಂಬವರಿಗೆ ಗಾಯವಾಗಿದೆ. ಈ ಸಂದರ್ಭ ಮನೆಯೊಳಗಿದ್ದ  ಮೀರಮ್ಮ, ಮಕ್ಕಳಾದ ದೀಪಿಕಾ, ಯೋಗೀಶ್ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News