ಹಲ್ಲೆಗೆ ಯತ್ನ: ಆರೋಪಿ ಸೆರೆ
Update: 2017-05-17 20:19 IST
ಬೆಳ್ತಂಗಡಿ, ಮೇ 17: ಗುರುವಾಯನಕೆರೆ ಬಸ್ ನಿಲ್ದಾಣದ ಬಳಿ ಗಾಡಿ ತೆಗೆಯುವ ವಿಚಾರದಲ್ಲಿ ಮಾತಿನ ಚಮಕಿ ನಡೆದ ವೇಳೆ ಮಹಿಳೆಗೆ ಚೂರಿಯಿಂದ ಇರಿಯಲು ಯತ್ನಿಸಿದ ಯುವಕನನ್ನು ಸ್ಥಳಿಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಬುಧವಾರ ನಡೆದಿದೆ.
ಲಾಯಿಲ ನಿವಾಸಿ ಉಮೇಶ್ ಎಂಬಾತ ಹಲ್ಲೆಗೆ ಯತ್ನಿಸಿದ ಆರೋಪಿ ಎಂದು ಗುರುತಿಸಲಾಗಿದೆ. ಆತ ಚೂರಿಯಿಂದ ಹಲ್ಲೆಗೆ ಮುಂದಾದಾಗ ಮಹಿಳೆ ಬೊಬ್ಬೆ ಹೊಡೆದಿದ್ದು ಅಲ್ಲಿಯೇ ಇದ್ದ ಸ್ಥಳೀಯರು ಈತನಿಂದ ಚೂರಿಯನ್ನು ವಶಪಡಿಸಿ, ನಂತರ ಪೋಲೀಸರಿಗೆ ಒಪ್ಪಿಸಿದ್ದಾರೆ.
ಬೆಳ್ತಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.