×
Ad

ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದ ಬೆಳುವಾಯಿಯ ಆಮಿಶ್ ಅಹ್ಮದ್

Update: 2017-05-17 20:45 IST

ಬೆಳುವಾಯಿ, ಮೇ 17: ಮಲೇಶ್ಯಾದ ಮಜುಂಗ್ ಪೆರಾಕ್ ನಲ್ಲಿ ಇತ್ತೀಚೆಗೆ ನಡೆದ 14ನೆ ಅಂತಾರಾಷ್ಟ್ರೀಯ ಮಟ್ಟದ ಒಕಿನಾವ ಗೊಜು ರಿಯೋ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಮೂಡುಬಿದಿರೆಯ ಲಿಟ್ಲ್ ಸ್ಟಾರ್ಸ್ ಇಂಡಿಯನ್ ಸ್ಕೂಲ್ ನ ವಿದ್ಯಾರ್ಥಿ, ಬೆಳುವಾಯಿ ಗ್ರಾಮದ ಆಮಿಶ್ ಅಹ್ಮದ್ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬೆಳುವಾಯಿ ನಿವಾಸಿ ಮುಹಮ್ಮದ್ ಹನೀಫ್ ಸಾಹೇಬ್ ರ ಮೊಮ್ಮಗ ಹಾಗೂ ಇಮ್ತಿಯಾಝ್ ಅಲಿಯವರ ಪುತ್ರನಾಗಿರುವ ಆಮಿಶ್ ಅಹ್ಮದ್ ಅಂತಾರಾಷ್ಟ್ರೀಯ ಮಟ್ಟದ ಈ ಸ್ಪರ್ಧಾಕೂಟದ 15-16 ವಯಸ್ಸಿನೊಳಗಿನ ಕುಮಿಟೆಯಲ್ಲಿ ಚಿನ್ನದ ಪದಕ ಗಳಿಸಿ ಈ ಸಾಧನೆ ಮೆರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News