ಸಹರಾನ್‌ಪುರ ಘಟನೆ:ಪಂಜಾಬ್ ಅಂಬೇಡ್ಕರ್ ಸೇನಾದಿಂದ ಯೋಗಿ ಪ್ರತಿಕೃತಿ ದಹನ
Update: 2017-05-17 21:33 IST
ಫಗ್ವಾರಾ,ಮೇ 17: ಸಹರಾನ್‌ಪುರದಲ್ಲಿ ದಲಿತರ ಮೇಲಿನ ದೌರ್ಜನ್ಯ ಮತ್ತು ಅವರ ಮನೆಗಳಿಗೆ ಬೆಂಕಿ ಹಚ್ಚಿರುವುದನ್ನು ವಿರೋಧಿಸಿ ಪಂಜಾಬ್ ಅಂಬೇಡ್ಕರ್ ಸೇನಾ ಮೂಲ ನಿವಾಸಿ ಕಾರ್ಯಕರ್ತರು ಬುಧವಾರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಪ್ರತಿಕೃತಿಯನ್ನು ದಹಿಸಿದರು.
ಈ ವಿಷಯದಲ್ಲಿ ರಾಷ್ಟ್ರಪತಿಗಳ ಮಧ್ಯಪ್ರವೇಶ ಕೋರಿ ಪ್ರತಿಭಟನಾಕಾರರು ಉಪವಿಭಾಗಾಧಿಕಾರಿಗಳಿಗೆ ಅಹವಾಲನ್ನೂ ಸಲ್ಲಿಸಿದರು.
ಬಿಜೆಪಿ ಮತ್ತು ಯೋಗಿ ದಲಿತ ವಿರೋಧಿಗಳು ಎಂದು ಆರೋಪಿಸಿದ ಸೇನಾದ ರಾಜ್ಯಾಧ್ಯಕ್ಷ ಹರ್ಭಜನ್ ಸುಮನ್ ಅವರು, ದಲಿತ ವಿರೋಧಿ ಘಟನೆಗಳು ವಿಶೇಷವಾಗಿ ಉತ್ತರ ಪ್ರದೇಶ,ಹರ್ಯಾಣ ಮತ್ತು ಗುಜರಾತ್‌ಗಳಲ್ಲಿ ಹೆಚ್ಚುತ್ತಲೇ ಇವೆ ಎಂದು ಬೆಟ್ಟು ಮಾಡಿದರು.