ಪುತ್ತಿಗೆ ಪಿಡಿಒ ಅಮಾನತು ವಿರೋಧಿಸಿ ಗ್ರಾಮಸ್ಥರ ಪ್ರತಿಭಟನೆ
Update: 2017-05-17 22:06 IST
ಮೂಡುಬಿದಿರೆ, ಮೇ 17: ಪುತ್ತಿಗೆ ಗ್ರಾಮ ಪಂಚಾಯತ್ ಪಿಡಿಒ ಮಾರ್ಶಲ್ ಡಿಸೋಜ ಅವರನ್ನು ಜಿಲ್ಲಾ ಪಂಚಾಯತ್ ಸಿಇಒ ಎಂ.ಆರ್.ರವಿ ಅಮಾನತುಗೊಳಿಸಿರುವುದನ್ನು ವಿರೋಧಿಸಿ ಬುಧವಾರದಂದು ಪುತ್ತಿಗೆ ಗ್ರಾಮಸ್ಥರು ಮತ್ತು ಪಂಚಾಯತ್ ಸದಸ್ಯರು ಗ್ರಾಮ ಪಂಚಾಯತ್ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿದರು.
ಜಿಲ್ಲಾ ಪಂಚಾಯತ್ ಸಿಇಒ ನಿರ್ದೇಶನದಂತೆ ಪ್ರತಿಭಟನಾಕಾರರ ಮನವಿಯನ್ನು ತೆಂಕಮಿಜಾರು ಪಿಡಿಒ ಸಾಯೀಶ್ ಚೌಟ್ ಅವರು ಪಡೆದರು.
ಕೆಡಿಪಿ ಸದಸ್ಯ ವಾಸುದೇವ ನಾಯಕ್, ಸದಸ್ಯ ಶಶಿಧರ ನಾಯಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಮೂಡಾ ಅಧ್ಯಕ್ಷ ಸುರೇಶ್ ಪ್ರಭು, ಪುತ್ತಿಗೆ ಪಂಚಾಯತ್ ಸದಸ್ಯರ ಪ್ರೆಸಿಲ್ಲಾ ಸಿಕ್ವೇರಾ, ಶಶಿಧರ್ ಅಂಚನ್, ವೀಣಾ, ನಾಗರಾಜ ಕರ್ಕೇರಾ ಹಾಗೂ ಗ್ರಾಮಸ್ಥರು, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.