×
Ad

ಮಾಂಡೋವಿ ಮೋಟಾರ್ಸ್‌ ಪ್ರೈವೇಟ್ ಲಿಮಿಟೆಡ್: ನೂತನ ಮಾರುತಿ ಡಿಝೈರ್ ಮಂಗಳೂರು ಮಾರುಕಟ್ಟೆಗೆ

Update: 2017-05-17 22:19 IST

ಮಂಗಳೂರು, ಮೇ 17: ಮಾರುತಿ ಸುಝುಕಿಯವರ ನೂತನ ಡಿಝೈರ್ ಕಾರನ್ನು ನಗರದ ಹಂಪನಕಟ್ಟೆ ಬಳಿ ಇರುವ ಮಾರುತಿ ಸುಝುಕಿಯ ಡೀಲರ್ ಮಾಂಡೋವಿ ಮೋಟಾರ್ಸ್‌ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ಕಟೀಲು ದೇವಳಯದ ಅರ್ಚಕ ಶ್ರೀ ವೆಂಕಟ್ರಮಣ ಅಸ್ರಣ್ಣ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.

ಮಾರುತಿ ಸಂಸ್ಥೆ ಕಾರು ತಯಾರಿಕೆಯ ದೇಶೀಯ ಜನಪ್ರಿಯ ಕಂಪೆನಿ ಎನ್ನುವುದು ಹೆಮ್ಮೆಯ ಸಂಗತಿ. ಗ್ರಾಹಕರಿಗೆ ಉತ್ತಮ ಕಾರುಗಳನ್ನು ಬಿಡುಗಡೆ ಮಾಡುತ್ತಿರುವ ಸಂಸ್ಥೆ, ತಮ್ಮ ಡೀಲರುಗಳ ಮೂಲಕ ಗ್ರಾಹಕರಿಗೆ ಉತ್ತಮ ಸೇವೆಗಳನ್ನು ನೀಡುತ್ತಾ ಬಂದಿವೆ. ನಗರದ ಮಾಂಡೋವಿ ಮೋಟಾರ್ಸ್‌ ಸಂಸ್ಥೆಯೂ ಉತ್ತಮ ಗ್ರಾಹಕ ಸೇವೆಯಿಂದ ಜನಪ್ರಿಯವಾಗಿದೆ ಎಂದು ಶ್ರೀ ವೆಂಕಟ್ರಮಣ ಅಸ್ರಣ್ಣ ಶುಭ ಹಾರೈಸಿದರು.

ಮಾಂಡೋವಿ ಮೋಟಾರ್ಸ್‌ ಹಾಗೂ ಆರೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಕಿಶೋರ್ ರಾವ್ ಮಾತನಾಡಿ, ‘ಮಾಂಡೋವಿ ಮೋಟಾರ್ಸ್‌ ಕಳೆದ ಮೂರು ವರ್ಷಗಳಲ್ಲಿ ಬಿಡಿ ಭಾಗಗಳ ಮಾರಾಟದಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ ಸಂಸ್ಥೆಯಾಗಿದೆ. ಅಲ್ಲದೆ ಸಂಸ್ಥೆ ಪ್ಲಾಟೀನಂ ಡೀಲರ್ ಆಗಿ ಮಾನ್ಯತೆ ಪಡೆದಿರುವ ಸಂಸ್ಥೆಯಾಗಿದ್ದು, ಮಾರುತಿ ಡಿಝೈರ್‌ಗೆ ಗ್ರಾಹಕರಿಂದ ಈಗಾಗಲೇ ಸಾಕಷ್ಟು ಬೇಡಿಕೆ ವ್ಯಕ್ತವಾಗಿದೆ’ ಎಂದರು.

ಮಾರಾಟ ವಿಭಾಗದ ಎಜಿಎಂ ಶಶಿಧರ ಕಾಮತ್ ಮಾತನಾಡಿ, ಮಾರುತಿ ಡಿಝೈರ್ ಪೆಟ್ರೋಲ್ ಮತ್ತು ಡೀಸೆಲ್ ಮಾದರಿಯಲ್ಲಿ ವಿವಿಧ ವರ್ಣಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ. ಡೀಸೆಲ್ ಕಾರು ಪ್ರತಿ ಲೀಟರ್‌ಗೆ 28.4 ಕಿ.ಮೀ ಹಾಗೂ ಪೆಟ್ರೋಲ್ ಕಾರು 22 ಕಿ.ಮೀ ಇಂಧನ ಕ್ಷಮತೆಯನ್ನು ಹೊಂದಿದೆ. ಅತ್ಯತ್ತಮ ವಿನ್ಯಾಸ, ಒಳಭಾಗದಲ್ಲಿ ಸಾಕಷ್ಟು ಸ್ಥಳಾವಕಾಶ, ಆಟೋ ಗೇರ್ ತಂತ್ರಜ್ಞಾನದ ಅನುಕೂಲವೂ ಇದೆ. ಕಾರಿನ ದರ 5.45 ಲಕ್ಷ ರೂ.ಯಿಂದ 9.41ಲಕ್ಷ ರೂ. ಆಗಿದ್ದು, ಲೆಡ್ ಪ್ರೊಜೆಕ್ಟರ್ ಹೆಡ್‌ಲೈಟ್, ವಿಶೇಷ ಸುರಕ್ಷಾ ಸೌಲಭ್ಯಗಳನ್ನು ಹೊಂದಿದೆ ಎಂದು ವಿವರಿಸಿದರು.

ಸಮಾರಂಭದಲ್ಲಿ ಮಾರುತಿ ಸುಝಕಿಯ ಏರಿಯಾ ವ್ಯವಸ್ಥಾಪಕ ದೀಪಕ್ ಶರ್ಮಾ ಮಾತನಾಡಿ, ನೂತನ ಮಾರುತಿ ಡಿಝೈರ್‌ಗೆ ಗ್ರಾಹಕರಿಂದ ಉತ್ತಮ ಬೇಡಿಕೆ ವ್ಯಕ್ತವಾಗಿದ್ದು, ಈಗಾಗಲೇ 33,000 ಗ್ರಾಹಕರು ಬುಕ್ಕಿಂಗ್ ಮಾಡಿದ್ದಾರೆ ಎಂದು ತಿಳಿಸಿದರು..

ಮಾಂಡೋವಿ ಮೋಟಾರ್ಸ್‌ ಸಂಸ್ಥೆಯ ಸೇವಾ ವಿಭಾಗದ ಜನರಲ್ ಮ್ಯಾನೇಜರ್ ಪಾಶ್ವನಾಥ್, ಮಾಂಡೋವಿ ಮೋಟಾರ್ಸ್‌ನ ನಿರ್ದೇಶಕ ಸಂಜಯ್ ರಾವ್, ಅರ್ಜುನ್ ರಾವ್ ಮೊದಲಾದವರು ಉಪಸ್ಥಿತರಿದ್ದರು.
ಮಾರಾಟ ವಿಭಾಗದ ಸಹಾಯಕ ವ್ಯವಸ್ಥಾಪಕ ಮುರಳೀಧರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News