ಕ್ರೀಡೆಯಿಂದ ಸಾಮಾಜಿಕ ಸಾಮರಸ್ಯ: ಸಚಿವ ರೈ
ಬಂಟ್ವಾಳ, ಮೇ 12: ಕ್ರೀಡೆ ಮನುಷ್ಯನ ಆರೋಗ್ಯಕ್ಕೆ ಎಷ್ಟು ಅಗತ್ಯವೋ ಅಷ್ಟೇ ಸಮಾಜದ ಆರೋಗ್ಯಕ್ಕೂ ಅತ್ಯಗತ್ಯವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಪುದು ವಲಯ ಯುವ ಕಾಂಗ್ರೆಸ್ ವತಿಯಿಂದ ಫರಂಗಿಪೇಟೆ ನೇತ್ರಾವತಿ ನದಿ ಕಿನಾರೆಯಲ್ಲಿ 3 ದಿನಗಳ ಕಾಲ ನಡೆದ ಎಪಿಎಲ್ ಲೀಗ್ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಕ್ರೀಡೆ ಸರ್ವ ಧರ್ಮದ ಯುವಕರನ್ನು ಒಟ್ಟು ಸೇರಿಸಿ ಯುವಕರ ಮಧ್ಯೆ ಸಾಮಾಜಿಕ ಸಾಮರಸ್ಯ ಹೆಚ್ಚು ಮಾಡುತ್ತದೆಯಲ್ಲದೆ ಸಮಾಜದಲ್ಲಿ ಭಾವೈಕ್ಯತೆಯ ಭಾವನೆಯನ್ನು ಉಂಟುಮಾಡುತ್ತದೆ. ಕ್ರೀಡೆಗೆ ಜಾತಿ, ಧರ್ಮ, ಭಾಷೆಯ ಭೇದ ಇರುವುದಿಲ್ಲ. ದೇಶ ದೇಶಗಳ ಮಧ್ಯೆ ಕ್ರೀಡೆ ನಡೆಯುವ ಉದ್ದೇಶವು ದೇಶಗಳ ಮಧ್ಯೆ ಸಂಬಂಧ ಹೆಚ್ಚು ಮಾಡುವುದಾಗಿದೆ ಎಂದು ಹೇಳಿದ ಅವರು ಸಮಾಜಕ್ಕೆ ಶಾಂತಿ ಬೇಕಾದರೆ ಮನುಷ್ಯ ಮನುಷ್ಯರ ಮಧ್ಯೆ ಅಪನಂಬಿಕೆ ಇರಬಾರದು. ಜಾತಿ, ಧರ್ಮ, ಭೇದವನ್ನು ಮೀರಿ ಮನುಷ್ಯತ್ವವನ್ನು ನಾವು ಮೈಗೂಡಿಸಿದಾಗ ಸುಂದರ ಸಮಾಜದ ನಿರ್ಮಾಣ ಸಾಧ್ಯ ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ.ಉಮರ್ ಫಾರೂಕ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ದ.ಕ. ಯುವ ಕಾಂಗ್ರೆಸ್ ನ ಮಿಥುನ್ ರೈ, ಲುಕ್‌ಮಾನ್ ಕೈಕಂಬ, ಉದ್ಯಮಿ ಕೆ.ಯಿ.ಎಲ್.ಇಸ್ಮಾಯೀಲ್, ತಾಪಂ ಸದಸ್ಯ ಸಮದ್ ಅಡ್ಯಾರ್, ತಾಪಂ ಮಾಜಿ ಸದಸ್ಯ ಆಶಿಫ್ ಇಕ್ಬಾಲ್, ಹಸೈನಾರ್ ಶಾಂತಿ ಅಂಗಡಿ, ಪುದು ಗ್ರಾಪಂ ಉಪಾಧ್ಯಕ್ಷ ಮುಹಮ್ಮದ್ ಹಾಶೀರ್, ಸದಸ್ಯ ರಮ್ಲಾನ್, ರಫೀಕ್ ಪೆರಿಮಾರ್, ಹಕೀಂ ಮಾರಿಪಲ್ಲ, ರಫೀಕ್ ಫರಂಗಿಪೇಟೆ, ಅಶ್ವದ್ ಡೈಮಾಂಡ್, ಕಿಶೋರ್ ಸುಜೀರ್, ಸಲಾಂ ಮಲ್ಲಿ, ಇಮ್ತಿಯಾಝ್ ಆಲ್ಫಾ, ಆಸಿಫ್ ಮೇಲ್ಮನೆ, ಝಾಹಿರ್, ಇಕ್ಬಾಲ್ ಸುಜೀರ್, ಗ್ರಾಪಂ ಮಾಜಿ ಅಧ್ಯಕ್ಷ ಅಖ್ತರ್ ಹುಸೈನ್, ಸಲೀಂ ಮಲ್ಲಿ, ಮುಸ್ತಫಾ ಅಮೆಮಾರ್, ಅನ್ಸಾರ್, ಇಮ್ರಾನ್, ಮಜೀದ್ ಪೆರಿಮಾರ್ ಮೊದಲಾದವರು ಉಪಸ್ಥಿತರಿದ್ದರು.