ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ

Update: 2017-05-17 18:34 GMT

 ಮೂಡುಬಿದಿರೆ, ಮೇ 17: ಮಲೇಶ್ಯಾದ ಮಜುಂಗ್ ಪೆರಾಕ್‌ನಲ್ಲಿ ಇತ್ತೀಚೆಗೆ ನಡೆದ 14ನೆ ಅಂತಾರಾಷ್ಟ್ರೀಯ ಮಟ್ಟದ ‘ಒಕಿನಾವ ಗೊಜು ರಿಯೋ’ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಮೂಡುಬಿದಿರೆಯ ಲಿಟ್ಲ್ ಸ್ಟಾರ್ಸ್‌ ಇಂಡಿಯನ್ ಸ್ಕೂಲ್‌ನ ವಿದ್ಯಾರ್ಥಿ, ಬೆಳುವಾಯಿ ಗ್ರಾಮದ ಆಮಿಶ್ ಅಹ್ಮದ್ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗಳಿಸಿದ್ದಾರೆ.

ಬೆಳುವಾಯಿ ನಿವಾಸಿ ಮುಹಮ್ಮದ್ ಹನೀಫ್ ಸಾಹೇಬ್‌ರ ಮೊಮ್ಮಗ ಹಾಗೂ ಇಮ್ತಿಯಾಝ್ ಅಲಿಯವರ ಪುತ್ರನಾಗಿರುವ ಆಮಿಶ್ ಅಹ್ಮದ್ ಅಂತಾರಾಷ್ಟ್ರೀಯ ಮಟ್ಟದ ಈ ಸ್ಪರ್ಧಾಕೂಟದ 15-16 ವಯಸ್ಸಿನೊಳಗಿನ ಕುಮಿಟೆ ವಿಭಾಗದಲ್ಲಿ ಈ ಸಾಧನೆ ಮೆರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News