ಗಿರಡ್ಡಿ ಗೋವಿಂದರಾಜ್‌ಗೆ ‘ಸೇಡಿಯಾಪು ಪ್ರಶಸ್ತಿ’
Update: 2017-05-18 00:04 IST
ಉಡುಪಿ, ಮೇ 17: ಕವಿ, ಸಾಹಿತಿ, ವಿಮರ್ಶಕ, ಚಿಂತಕ ಗಿರಡ್ಡಿ ಗೋವಿಂದ ರಾಜ್ 2017ನೆ ಸಾಲಿನ ಸೇಡಿಯಾಪು ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು 10,000ರೂ. ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವು ಜೂ.8ರಂದು ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಸಂಯೋಜಕ ಪ್ರೊ.ವರದೇಶ ಹಿರೇಗಂಗೆ ಹಾಗೂ ಸಹಸಂಯೋಜಕ ಡಾ.ಅಶೋಕ್ ಆಳ್ವ ಪ್ರಕಟನೆಯಲ್ಲಿ ತಿಳಿಸಿದ್ದಾರೆ.