ನಿಟ್ಟೆ: ‘ಐ ಸ್ಕ್ವಯರ್ ಕನೆಕ್ಟ್’ ಕಾರ್ಯಕ್ರಮ ಉದ್ಘಾಟನೆ
ನಿಟ್ಟೆ, ಮೇ 17: ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಅನನ್ಯ ಕೌಶಲ್ಯತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ನಿಟ್ಟೆ ತಾಂತ್ರಿಕ ವಿಶ್ವವಿದ್ಯಾನಿಲಯದ ಇಂಡಸ್ಟ್ರಿ ಇನ್‌ಸ್ಟಿಟ್ಯೂಟ್ ವಿಭಾಗದ ನಿರ್ದೇಶಕ ಡಾ.ಎ.ಎನ್. ಪರಮೇಶ್ವರನ್ ಅಭಿಪ್ರಾಯಪಟ್ಟರು.
ನಿಟ್ಟೆ ತಾಂತ್ರಿಕ ವಿಶ್ವವಿದ್ಯಾನಿಲಯದ ಐಇಇಇ ಸ್ಟೂಡೆಂಟ್ ಚಾಪ್ಟರ್ ಮಂಗಳೂರು ಉಪ ವಿಭಾಗದ ವತಿಯಿಂದ ನಡೆದ ಸ್ಥಳೀಯ ಅಂತರ್ ಕಾಲೇಜು ಎಂ.ಟೆಕ್ ಪ್ರಾಜೆಕ್ಟ್ ಸ್ಪರ್ಧೆ ‘ಐ ಸ್ಕ್ವಯರ್ ಕನೆಕ್ಟ್’ ಕಾರ್ಯಕ್ರಮವನ್ನು ಉದ್ಘಾ ಟಿಸಿ ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ಪ್ರಾಜೆಕ್ಟ್ ಆಯ್ಕೆಯ ಸಂದಭರ್ ತಮ್ಮ ಆಸಕ್ತ ಕ್ಷೇತ್ರದಲ್ಲಿ ಅತ್ಯಾಕರ್ಷಕ ಪ್ರಾಜೆಕ್ಟ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ವಿಶ್ವವಿದ್ಯಾನಿಲಯದ ಪ್ರಾಂಶುಪಾಲ ಹಾಗೂ ಐಇಇಇ ಸ್ಟೂಡೆಂಟ್ ಚಾಪ್ಟರ್ ಮಂಗಳೂರು ಉಪವಿಭಾಗದ ಅಧ್ಯಕ್ಷ ಡಾ. ನಿರಂಜನ್ ಎನ್.ಚಿಪ್ಳೂಣ್ಕರ್ ಎಂ.ಟೆಕ್ ವಿದ್ಯಾ ರ್ಥಿಗಳಿಗೆ ತಮ್ಮ ಪ್ರೊಜೆಕ್ಟ್ ಪ್ರದರ್ಶನಕ್ಕೆ ಒಂದು ಉತ್ತಮ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಐಇಇಇ ಸ್ಟೂಡೆಂಟ್ ಚಾಪ್ಟರ್ ಮಂಗಳೂರು ಉಪ ವಿಭಾ ಗದ ವತಿಯಿಂದ ಸ್ಥಳೀಯ ಅಂತರ್ ಕಾಲೇಜು ಎಂ.ಟೆಕ್ ಪ್ರಾಜೆಕ್ಟ್ ಸ್ಪರ್ಧೆ ‘ಐ ಸ್ಕ್ವಯರ್ ಕನೆಕ್ಟ್ ’ ಹಮ್ಮಿಕೊಳ್ಳಲಾಗಿದೆ. ಈ ಸ್ಪರ್ಧೆಯನ್ನು ಸರ್ಕ್ಯುಟ್ ಮತ್ತು ನಾನ್‌ಸರ್ಕ್ಯುಟ್ ಎಂಬ ಎರಡು ವಿಭಾಗದಲ್ಲಿ ನಡೆಸಲಾಗುತ್ತಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಾದ ಶ್ರೀನಿಧಿ ಮತ್ತು ಮಹಿಮಾ ಪ್ರಾರ್ಥಿಸಿದರು. ಎಲೆಕ್ಟ್ರಾನಿಕ್ಸ್ ವಿಭಾಗದ ಸಹ ಪ್ರಾಧ್ಯಾಪಕ ದಿಲೀಪ್ ಕುಮಾರ್ ಅತಿಥಿಗಳನ್ನು ಪರಿಚಯಿಸಿದರು. ಐಇಇಇ ಸ್ಟೂಡೆಂಟ್ ಚಾಪ್ಟರ್ ಮಂಗಳೂರು ಉಪವಿಭಾಗದ ಸದಸ್ಯ ಡಾ.ಕೆ.ವಿ.ಎಸ್.ಎಸ್.ಎಸ್.ಸಾಯಿರಾಮ್ ವಂದಿ ಸಿದರು. ಎಲೆಕ್ಟ್ರಾನಿಕ್ಸ್ ವಿಭಾಗದ ಸಹಪ್ರಾಧ್ಯಾಪಕಿ ಪ್ರಭಾ ನಿರಂಜನ್ ಕಾರ್ಯಕ್ರಮ ನಿರೂಪಿಸಿದರು.