ಬಾಲಿವುಡ್ ನ 'ಫೇವರಿಟ್ ಅಮ್ಮ' ರೀಮಾ ಲಾಗು ಇನ್ನಿಲ್ಲ
Update: 2017-05-18 08:56 IST
ಹೊಸದಿಲ್ಲಿ, ಮೇ 18: ಬಾಲಿವುಡ್ ಸಿನೆಮಾ ಹಾಗೂ ಕಿರುತೆರೆ ರಂಗದ ಹಿರಿಯ ನಟಿ ರೀಮಾ ಲಾಗೂ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅನಾರೋಗ್ಯದಿಂದಿದ್ದ ಅವರನ್ನು ಮುಂಬೈಯ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು,
ಕಿರುತೆರೆ ಹಾಗೂ ಸಿನೆಮಾಗಳಲ್ಲಿ ಪ್ರಮುಖವಾಗಿ ತಾಯಿಯ ಪಾತ್ರಗಳಲ್ಲಿ ಮಿಂಚಿದ್ದ ಇವರು “ಹಮ್ ಆಪ್ ಕೆ ಹೈ ಕೌನ್”, ಹಮ್ ಸಾತ್ ಸಾತ್ ಹೈ, ಮೈನ್ ಪ್ಯಾರ್ ಕಿಯಾ, ಕಲ್ ಹೋ ನಹೋ ಹಾಗೂ ಇತರ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.
ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಶ್ರೀದೇವಿ, ಮಾಧುರಿ ದೀಕ್ಷಿತ್ ಹಾಗೂ ಶಾರುಖ್ ಖಾನ್ ಚಿತ್ರಗಳಲ್ಲಿ ಈ ಬಾಲಿವುಡ್ ನಟ, ನಟಿಯರ ತಾಯಿಯಾಗಿ ರೀಮಾ ಮಿಂಚಿದ್ದರು. ನಾಲ್ಕು ಬಾರಿ ಅತ್ಯುತ್ತಮ ಪೋಷಕ ನಟಿ ಫಿಲ್ಮ್‌ಫೇರ್ ಪ್ರಶಸ್ತಿಗೆ ಪಾತ್ರರಾಗಿದ್ದರು. ರೀಮಾ ಲಾಗು ತಮ್ಮ ಪುತ್ರಿ ಮೃಣ್ಮಯಿ ಹಾಗೂ ಅಪಾರ ಸ್ನೇಹಿತವರ್ಗ ಹಾಗೂ ಹಿತೈಷಿಗಳನ್ನು ಅಗಲಿದ್ದಾರೆ.