ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಚುನಾವಣೆ: 6 ವಿಧಾನಸಭಾ ಕ್ಷೇತ್ರಗಳಲ್ಲಿ ಮಿಥುನ್ ರೈ ಬೆಂಬಲಿಗರಿಗೆ ಜಯ
Update: 2017-05-18 11:49 IST
ಮಂಗಳೂರು, ಮೇ 18: ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳ ಚುನಾವಣೆಯ ಆರು ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಈಗಾಗಲೇ ಪ್ರಕಟಗೊಂಡಿದ್ದು, ಮಿಥುನ್ ರೈಯವರ ಬೆಂಬಲಿಗರು ಮೇಲುಗೈ ಸಾಧಿಸಿದ್ದಾರೆ.
ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದಿರುವ ಚುನಾವಣೆಯಲ್ಲಿ ಅಭ್ಯರ್ಥಿಗಳಾದ ಮಿಥುನ್ ರೈ ಹಾಗೂ ಲುಕ್ಮಾನ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಈಗಾಗಲೇ 6 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದ್ದು, ಮಿಥುನ್ ರೈ ಬೆಂಬಲಿತರಾದ ಸುಳ್ಯದಲ್ಲಿ ಸಿದ್ದೀಕ್, ಮೂಡುಬಿದಿರೆಯಲ್ಲಿ ಚಂದ್ರಹಾಸ ಸನಿಲ್, ಬೆಳ್ತಂಗಡಿಯಲ್ಲಿ ಅಭಿನಂದನ್, ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಗಿರೀಶ್ ಆಳ್ವ, ಬಂಟ್ವಾಳದಲ್ಲಿ ಪ್ರಶಾಂತ್ ಕುಮಾರ್ ಹಾಗೂ ಪುತ್ತೂರಿನಲ್ಲಿ ಯು.ಟಿ. ತೌಸೀಫ್ ಜಯಗಳಿಸಿದ್ದಾರೆ.
ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ರವೂಫ್ ದೇರಳಕಟ್ಟೆ ಹಾಗೂ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮೆರಿಲ್ ರೇಗೋ ಜಯಗಳಿಸಿದ್ದಾರೆ.