×
Ad

ಐದು ವರ್ಷದ ಅಂಜನಾಳ ತೂಕ 8.700 ಕೆಜಿ !

Update: 2017-05-18 14:59 IST

ಕ್ಯಾಲಿಕಟ್, ಮೇ 18: ಆದಿವಾಸಿ ಅಂಜನಾಳಿಗೆ ಬರೇ ಐದು ವರ್ಷ, ಒಂದು ವರ್ಷದ ಮಗುವಿಗೆ ಹೊಂದಿರುವಷ್ಟೇ ಅವಳ ಭಾರವಿದೆ.8.700 ಕೆಜಿ. ನಿರಂತರ ಭೇದಿ, ನಿರ್ಜಲೀಕರಣ ಸಮಸ್ಯೆಯಿಂದ ನಿತ್ರಾಣಳಾಗಿ ಎರಡು ವಾರಗಳಿಂದ ಅಂಜನಾ ಕ್ಯಾಲಿಕಟ್ ವೈದ್ಯಕಕೀಯ ಕಾಲೇಜು ಮಾತೃಶಿಶು ಸಂರಕ್ಷಣಾ ಕೇಂದ್ರದ ವಾರ್ಡ್‌ನಲ್ಲಿ ಮಲಗಿದ್ದಾಳೆ. ಅವಳ ಬಳಿ ಪುಟ್ಟತಂಗಿಯನ್ನು ಒಂದು ನಿಮಿಷವೂ ಆಚೀಚೆ ಹೋಗದೆ ಅಕ್ಕ ಅಜಿತಾ ಇದ್ದಾಳೆ. ಅಜಿತಾಳಿಗೆ ಕೇವಲ ಹದಿನಾಲ್ಕುವರ್ಷ. ಇನ್ನು ನೆರವಿಗೆ ಇರುವುದು ದಾದಿಯರು. ಮತ್ತು ಆಚೀಚೆ ಬೆಡ್‌ನಲ್ಲಿ ಮಲಗಿರುವ ಇತರ ರೋಗಿಗಳು. ಇವರಲ್ಲದೆ ಬೇರೆ ಯಾರೂ ಇಲ್ಲ. ಯಾಕೆಂದರೆ ಅವರಿಬ್ಬರು ಅನಾಥ ಮಕ್ಕಳು. ಮಾವ ಓಣ ಎಂಬವರ ಮನೆಯಲ್ಲಿ ಇಬ್ಬರು ಇದ್ದಾರೆ. ಅಂಜನಾ ಅನಾರೋಗ್ಯಕ್ಕೀಡಾದಾಗ ಸಂಬಂಧಿಕ ಮಹಿಳೆಯೊಬ್ಬರು ಅಜಿತಾಳನ್ನು ಕರೆದುಕೊಂಡು ಬಂದು ಆಸ್ಪತ್ರೆಗೆ ಸೇರಿಸಿಹೋಗಿದ್ದಾರೆ.

 ಕೊಡಿಂಚೇರಿ ಚೆಂಬುಕಡವ್ ಅಂಬೇಡ್ಕರ್ ಕಾಲನಿಯಲ್ಲಿ ಇವರ ಮನೆಯಿದೆ . ಈ ಕಾಲನಿ ಪೋಷಕಾಹಾರ ಕೊರತೆ ಎದುರಿಸುವ ಅನೇಕ ದುರದೃಷ್ಟ ಮಕ್ಕಳಲ್ಲಿ ಅಂಜನಾ ಕೂಡಾ ಒಬ್ಬಳು. ಕಳೆದ ವರ್ಷ ಅಮ್ಮ ಲೀಲಾ ಜ್ವರಬಾಧೆಯಿಂದ ಮೃತರಾದರು. ಎರಡು ವರ್ಷ ಹಿಂದೆ ಅಪ್ಪ ಚೆಂಬನ್ ಆತ್ಮಹತ್ಯೆ ಮಾಡಿಕೊಂಡಿದ್ದರು. ರೋಗಿಯಾಗಿರುವ ಸಹೋದರ ಅಜ್ಜಿ ಮನೆಯಲ್ಲೇ ಇದ್ದಾನೆ. ಇದೇ ಆಸ್ಪತ್ರೆಯಲ್ಲಿಯೇ ಅಜ್ಜಿ ಕೂಡಾ ಚಿಕಿತ್ಸೆ ಪಡೆದಿದ್ದ. ಈಗ ಮನೆಯಲ್ಲಿ ಔಷಧೋಪಚಾರ ಮುಂದುವರಿದಿದೆ. ಅವನನ್ನು ಪೋಷಕಾಹಾರ ಕೊರತೆ ಕಾಡುತ್ತಿದೆ.

ಆದಿವಾಸಿಗಳಿಗೆ ಕೇರಳ ಸರಕಾರ ಕೋಟ್ಯಂತರ ರೂಪಾಯಿ ಮೀಸಲಿಡುತ್ತದೆ. ಆದರೆ ಅದು ಆಸ್ಪತ್ರೆಯ ಹತ್ತಿರವೂ ತಲುಪುವುದಿಲ್ಲ. ಇದಕ್ಕೆ ಪೋಷಕಾಹಾರ ಕೊರತೆಯ ಅಂಜನಾಳ ಪುಟ್ಟ ಶರೀರವೇ ಸಾಕ್ಷಿಯನ್ನು ಒದಗಿಸುತ್ತಿದೆ. ತಂಗಿ ಅಂಜನಾಳ ಬಳಿ ಕುಳಿತು ಅಜಿತಾ ದುರದೃಷ್ಟವನ್ನು ನೆನೆದು ದುಃಖಿಸುವುದಷ್ಟೆ ಸಾಧ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News