×
Ad

ಲಾರಿ ಢಿಕ್ಕಿಯಾಗಿ ರಿಕ್ಷಾ ಚಾಲಕ ಮೃತ್ಯು

Update: 2017-05-18 15:53 IST

ಕಾಸರಗೋಡು, ಮೇ 18: ಲಾರಿ ಮತ್ತು ಆಟೋರಿಕ್ಷಾ ಢಿಕ್ಕಿ ಹೊಡೆದು ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಮುಂಜಾನೆ ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಪೆರುವಾಡ್ ನಲ್ಲಿ ನಡೆದಿದೆ.

ಮೃತಪಟ್ಟವರನ್ನು ಚೌಕಿ ಮಜಲ್ ನ ಮುಹಮ್ಮದ್ ರಫೀಕ್ (30) ಎಂದು ಗುರುತಿಸಲಾಗಿದೆ. ಕುಂಬಳೆಯಲ್ಲಿ ಆಟೋ ಚಾಲಕರಾಗಿದ್ದ ಇವರು ಮುಂಜಾನೆ   ಚೌಕಿಯ ಮನೆಗೆ ತೆರಳುತ್ತಿದ್ದಾಗ ಮಂಗಳೂರು ಕಡೆಗೆ ತೆರಳುತ್ತಿದ್ದ ಲಾರಿ ಢಿಕ್ಕಿ  ಹೊಡೆದಿದೆ. 

ಅಪಘಾತದಿಂದ ನಜ್ಜುಗುಜ್ಜಾದ ಆಟೋದಲ್ಲಿ ಸಿಲುಕಿದ್ದ ರಫೀಕ್ ರನ್ನು ನಾಗರಿಕರು ಹೊರತೆಗೆದರೂ ಆಗಲೇ ಅವರು ಮೃತಪಟ್ಟಿದ್ದರು. ಅಪಘಾತದ ಬಳಿಕ ಪರಾರಿಯಾಗಿದ್ದ ಟ್ಯಾoಕರನ್ನು ಬೆನ್ನಟ್ಟಿದ ನಾಗರಿಕರು ಚಾಲಕನನ್ನು ಹಿಡಿದು ಪೊಲೀಸರಿಗೊಪ್ಪಿಸಿದರು. ಈ ಬಗ್ಗೆ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News