×
Ad

ಮಿಡ್‌ಡೇ ಶೈಕ್ಷಣಿಕ ಜೀವಮಾನ ಸಾಧಕ ಪುರಸ್ಕಾರ: ರಾಯನ್ ಸಮೂಹ ಸಂಸ್ಥೆಗಳ ಪ್ರವರ್ತಕಿ ಗ್ರೇಸ್ ಪಿಂಟೋ ಆಯ್ಕೆ

Update: 2017-05-18 18:20 IST

ಮುಂಬೈ, ಮೇ18: ಮಿಡ್‌ಡೇ ಸಮೂಹವು ಶಿಕ್ಷಣ ರಂಗದ ಅಪರಿಮಿತ ಸೇವಾ ಕೊಡುಗೆಗಾಗಿ ಶಿಕ್ಷಣ ರಂಗದ ಮೇರು ಸಾಧಕಿ ರಾಯನ್ ಅಂತಾರಾಷ್ಟ್ರೀಯ ಶೈಕ್ಷಣಿಕ ಸಮೂಹ ಸಂಸ್ಥೆಗಳ ಪ್ರವರ್ತಕಿ, ಆಡಳಿತ ನಿರ್ದೇಶಕಿ ಮೇಡಂ ಗ್ರೇಸ್ ಪಿಂಟೋ ಅವರಿಗೆ ‘ಶೈಕ್ಷಣಿಕ ಜೀವಮಾನ ಸಾಧಕ ಪುರಸ್ಕಾರ ನೀಡಿ ಗೌರವಿಸಿತು.

ಕಳೆದ ಮಂಗಳವಾರ ಅಂಧೇರಿ ಪೂರ್ವದ ಸಹಾರ ಇಲ್ಲಿನ ಹೈಯತ್ತ್ ರೀಜೆನ್ಸಿ ಪಂಚತಾರಾ ಹೊಟೇಲ್‌ನ ಸಭಾಗೃಹದಲ್ಲಿ ನಡೆದ  ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯೆ, ಬಿಜೆಪಿ ಮಹಾರಾಷ್ಟ್ರ ಪ್ರದೇಶ ಸಮಿತಿಯ ಖಜಾಂಚಿ, ಮುಂಬೈ ವಕ್ತಾರೆ, ಫ್ಯಾಶನ್ ಡಿಸಾಯ್ನಾರ್ ಶೈನಾ ಎನ್.ಸಿ. ಅವರು ಈ ಪುರಸ್ಕಾರವನ್ನು ಮೇಡಂ ಗ್ರೇಸ್ ಪಿಂಟೋ ಅವರಿಗೆ ನೀಡಿ ಗೌರವಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News