ಯುವ ಜೆಡಿಎಸ್ ಕಾರ್ಯಕರ್ತರಿಂದ ರಕ್ತದಾನ ಶಿಬಿರ
Update: 2017-05-18 18:37 IST
ಮಂಗಳೂರು, ಮೇ 18: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ 85ನೆ ಹುಟ್ಟು ಹಬ್ಬದ ಪ್ರಯುಕ್ತ ಯುವ ಜೆಡಿಎಸ್ ವತಿಯಿಂದ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು.
ದ.ಕ. ಜಿಲ್ಲಾ ಯುವ ಜನತಾ ದಳ ಅಧ್ಯಕ್ಷ ಅಕ್ಷಿತ್ ಸುವರ್ಣ, ಜೆಡಿಎಸ್ ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ, ಕಾರ್ಪೊರೇಟರ್‌ಗಳಾದ ಅಝೀಝ್ ಕುದ್ರೋಳಿ, ರಮೀಝಾ ನಾಸೀರ್, ಪಕ್ಷದ ಮುಖಂಡರಾದ ರಾಮ್ ಗಣೇಶ್, ಮಧುಸೂದನ ಗೌಡ, ಅಶ್ರಕ್ ಇಸ್ಮಾಯಿಲ್, ಫೈಝಲ್, ದೀಪಕ್, ಸಿನಾನ್, ತೇಜಸ್ ನಾಯಕ್, ಈತೇಶ್ ರೈ, ಔಷಫ್, ಸಮೀರ್, ಅಬ್ದುಲ್ ಹಾದಿ, ಸಫ್ವಾನ್ ಮುನೀರ್ ಮುಕ್ಕಚೇರಿ, ರತ್ನಾಕರ್ ಸುವರ್ಣ, ಇಕ್ಬಾಲ್ ಇಲಿಮನೆ ಮತ್ತಿತರರು ಉಪಸ್ಥಿತರಿದ್ದರು.