ಮೆಕ್-ಟೆಕ್ ಗ್ಯಾರೇಜ್, ಸ್ಟಾರ್ಟ್ ಅಫ್ಸ್ ಸಹ್ಯಾದ್ರಿ ಉದ್ಘಾಟನೆ
ಮಂಗಳೂರು, ಮೇ18: ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ರಾಜೀವ್ ಪ್ರತಾಪ್ ರೂಡಿ ಮೆಕ್-ಟೆಕ್ ಗ್ಯಾರೇಜ್ ಮತ್ತು ಸ್ಟಾರ್ಟ್ ಅಫ್ಸ್ ಸಹ್ಯಾದ್ರಿಯನ್ನು ಉದ್ಘಾಟಿಸಿದರು.
ದೇಶದಲ್ಲಿ ಕೌಶಲ್ಯ ಅಭಿವೃದ್ಧಿ ಯೋಜನೆಯ ಮೂಲಕ ಸಾಕಷ್ಟು ಮಂದಿಗೆ ಉದ್ಯೋಗವಕಾಶಕ್ಕೆ ಅಧಿಕೃತ ಮನ್ನಣೆ ದೊರೆಯಲಿದೆ. ದೇಶದಲ್ಲಿ 3.2 ಮಿಲಿಯನ್ ವಿದ್ಯಾರ್ಥಿಗಳು ಐಟಿಐಗೆ ಸೇರುತ್ತಾರೆ. ಐಟಿಐ ಸೇರುವವರಿಗೂ ಐಐಟಿ, ಎನ್‌ಐಟಿ ಮಾದರಿಯಲ್ಲಿ ಶಿಕ್ಷಣ ಪಡೆಯುವ ಅವಕಾಶವನ್ನು ಕಲ್ಪಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಾಪ್ ರೂಡಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಅನಿಲ್ ಮಾಧವ ದವೆ ಅವರ ನಿಧನಕ್ಕೆ ಸಚಿವ ರಾಜೀವ್ ಪ್ರತಾಪ್ ರೂಡಿ ಸಂತಾಪ ಸೂಚಿಸಿದರು.
ಸ್ಟಾರ್ಟ್ ಅಫ್ -ಸಹ್ಯಾದ್ರಿ ಬಗೆಗಿನ ಮಾಹಿತಿ ಪತ್ರವನ್ನು ಪ್ರಕಾಶ್ ಜಾವಡೇಕರ್ ಬಿಡುಗಡೆಗೊಳಿಸಿದರು. ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮಂಜುನಾಥ ಭಂಡಾರಿ ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಸಂಸದ ನಳಿನ್ ಕುಮಾರ್ ಕಟೀಲ್ ಉಪಸ್ಥಿತರಿದ್ದರು.