​ದತ್ತಿನಿಧಿ ಪ್ರಶಸ್ತಿಗೆ ಅರ್ಜಿ ಆಹ್ವಾನ

Update: 2017-05-18 14:10 GMT

ಮಂಗಳೂರು, ಮೇ 18: 2016ರಲ್ಲಿ ಪ್ರಕಟವಾದ ಕನ್ನಡ ಪುಸ್ತಕಗಳಿಗೆ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿರುವ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗೆ ಪುಸ್ತಕಗಳನ್ನು ಆಹ್ವಾನಿಸಲಾಗಿದೆ.

ಮಲ್ಲಿಕಾ ಪ್ರಶಸ್ತಿ ದತ್ತಿ, ಅಂತಾರಾಷ್ಟ್ರೀಯ ಮಹಿಳಾ ವರ್ಷದ ‘ಮಹಿಳಾ ದತ್ತಿ’, ಶಾರದಾ ರಾಮಲಿಂಗಪ್ಪದತ್ತಿ, ಲಿಂ.ಲಲಿತಾದೇವಿ ಗುರುಸಿದ್ದಪ್ಪಸಿಂಧೂರ ದತ್ತಿ, ನೀಲಗಂಗಾ ದತ್ತಿ, ಕೆ.ಎಸ್. ಭಾರತಿ ರಾಜಾರಾಮ್ ಮಧ್ಯಸ್ಥ ದತ್ತಿ, ಶಾರದಾ ಆರ್.ರಾವ್ ದತ್ತಿ, ದಿ. ಗೌರಮ್ಮ ಹಾರ್ನಹಳ್ಳಿ ಕೆ.ಮಂಜಪ್ಪದತ್ತಿ, ದಿ. ಎಚ್. ಕರಿಯಣ್ಣ ದತ್ತಿ, ಡಾ. ಎಚ್.ನರಸಿಂಹಯ್ಯ ದತ್ತಿ, ಅಸುಂಡಿ ಹುದ್ದಾರ್ ಕೃಷ್ಣರಾವ್ ಸ್ಮಾರಕ ದತ್ತಿ, ಜಿ.ಪಿ. ರಾಜರತ್ನ ಸಂಸ್ಮರಣ ದತ್ತಿ (ಮಕ್ಕಳ ಪುಸ್ತಕ ಬಹುಮಾನ ಸ್ಪರ್ಧೆ- ದ.ಕ. ಮತ್ತು ಉಡುಪಿ ಜಿಲ್ಲೆಗಳ ಬರಹಗಾರರಿಗೆ ಮಾತ್ರ ಅವಕಾಶ), ದಿ.ಕೆ.ವಿ. ರತ್ನಮ್ಮ ದತ್ತಿ, ರತ್ನಾಕರವರ್ಣಿ-ಮುದ್ದಣ-ಅನಾಮಿಕ ದತ್ತಿ, ಅಕ್ಕಮ್ಮ ಗಿರಿಗೌಡ ರುದ್ರಪ್ಪದತ್ತಿ, ಜಯಲಕ್ಷಮ್ಮ ಬಿ.ಎಸ್. ಸಣ್ಣಯ್ಯ ದತ್ತಿ, ಕುಂಬಾಸ ಪ್ರಶ್ತಿ ದತ್ತಿ, ಪ್ರೊ.ಡಿ.ಸಿ. ಅನಂತಸ್ವಾಮಿ ದತ್ತಿ, ಜಿ.ಆರ್. ರೇವಯ್ಯ ದತ್ತಿ, ಸಿಸು ಸಂಗಮೇಶ ದತ್ತಿ, ಪಂಪಮ್ಮ-ಶರಣೇಗೌಡ ರುಪಾಪುರ ದತ್ತಿ, ಕೆ. ವಾಸುದೇವಾಚಾರ್ ದತ್ತಿ, ಡಾ. ಆರ್.ಜೆ. ಗಲಗಲಿ ದತ್ತಿ, ಹೊಳಲ್ಕೆರೆ ಪದ್ಮಾವತಮ್ಮ ಶ್ರೀಪಾಲಶೆಟ್ಟಿ ಡಾ. ಮದನಕೇಸರಿ ಜೈನ ದತ್ತಿ, ಬಿಜಾಪುರ ಜಿಲ್ಲಾ ಸಮೀರವಾಡಿಯಲ್ಲಿ ನಡೆದ 7ನೆಯ ಜಿಲ್ಲಾ ಕನ್ನಡ ಸಾತ್ಯ ಸಮ್ಮೇಳನದ ನೆನಪಿನ ದತ್ತಿ (ಬಾಗಲಕೋಟೆ ಮತ್ತು ಬಿಜಾಪುರ ಜಿಲ್ಲೆಯ ಲೇಖಕ ಲೇಖಕಿಯರಿಗೆ ಮಾತ್ರ ಅವಕಾಶ), ವಸುದೇವ ಭೂಪಾಲಂ ದತ್ತಿ, ದಿ. ಡಿ. ಮಣಿಕರಾವ ಸ್ಮರಣಾರ್ಥ ಹಾಸ್ಯ ಸಾಹಿತ್ಯ ದತ್ತಿ, ದಿ. ಕಾಕೋಳು ಸರೋಜಮ್ಮ ದತ್ತಿ,ದಿ. ಡಾ. ಎ.ಎಸ್. ಧರಣೇಂದ್ರಯ್ಯ-ಮನೋಜ್ಞಾನ ದತ್ತಿ, ನಾ.ಕು. ಗಣೇಶ್ ದತ್ತಿ, ಬೀಳಗಿಯಲ್ಲಿ 2011ರಲ್ಲಿ ನಡೆದ ಬೀಳಗಿ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತನ ಸವಿನೆನಪು ದತ್ತಿ, ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರದರ್ಸ್‌ ದತ್ತಿ, ಸಾರಂಗಿ ವೆಂಕಟರಾಮಯ್ಯ ಶ್ರೀನಿವಾಸರಾವ್ ದತ್ತಿನಿಧಿ, ಪಳಕಳ ಸೀತಾರಾಮಭಟ್ಟ ದತ್ತಿನಿಧಿ, ಪೂಜ್ಯ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ರಸ್ತೆ ದತ್ತಿ, ಭರತೀಸುತ ಸ್ಮಾರಕ ದತ್ತಿ ಪ್ರಶಸ್ತಿ, ಲಕ್ಷ್ಮೀದೇವಿ ಶಾಂತರಸ ಹೆಂಬೇರಾಳು ದತ್ತಿ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ ಬೀಳಗಿ ಘಟಕ ದತ್ತಿ ಪ್ರಶಸ್ತಿ, ಪ್ರಕಾಶಕ ಆರ್.ಎನ್. ಹಬ್ಬು ದತ್ತಿ ಪ್ರಶಸ್ತಿ, ಅಮೃತ ಮಹೋತ್ಸವ ಸಾಹಿತ್ಯ ಸಮ್ಮೇಳನದ ಸವಿ ನೆನಪಿನ ದತ್ತಿ(ಬಸವರಾಜು ದತ್ತಿ), ನಿಡಸಾಲೆ ಪುಟ್ಟಸ್ವಾಮಯ್ಯ ಸಾಹಿತ್ಯ ಪ್ರಶಸ್ತಿ ದತ್ತಿ, ಗುಬ್ಬಿ ಸೋಲೂರು ಮುರುಗಾರಾಧ್ಯ ದತ್ತಿ ಪ್ರಶಸ್ತಿ, ಗೌರಮ್ಮ ಗಂಗಾಧರಯ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಶಸ್ತಿ, ಗೌರುಭಟ್ ದತ್ತಿ ಪ್ರಶಸ್ತಿ, ಜಯಲಕ್ಷ್ಮೀ ಮತ್ತು ಬಾಪು ರಾಮಣ್ಣ ದತ್ತಿ ಪ್ರಶಸ್ತಿಗೆ ಜೂ.30ರೊಳಗೆ ತಲಾ 3 ಪುಸ್ತಕಗಳನ್ನು ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು 560018ಕ್ಕೆ ಕಳುಹಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News