×
Ad

ಸಿಎಫ್‌ಐ ಬೇಸಿಗೆ ಶಿಬಿರ ಸಮಾರೋಪ

Update: 2017-05-18 20:01 IST

ಮಂಗಳೂರು, ಮೇ 18: ಸಿಎಫ್‌ಐ ಕರ್ನಾಟಕ ವತಿಯಿಂದ ಬಂಟ್ವಾಳ ಹಾಗೂ ಮಂಗಳೂರು ವ್ಯಾಪ್ತಿಗೊಳಪಟ್ಟ ವಿದ್ಯಾರ್ಥಿಗಳ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮವು ಇತ್ತೀಚೆಗೆ ಮಿತ್ತೂರಿನ ಫ್ರೀಡಂ ಕಮ್ಯುನಿಟಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಎಫ್‌ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಾಕಿರ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಸಿಎಫ್‌ಐ ರಾಜ್ಯ ಸಲಹಾ ಸಮಿತಿಯ ಅಧ್ಯಕ್ಷ ಶಾಫಿ ಬೆಳ್ಳಾರೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಗೆಗೆ ಇಂತಹ ಶಿಬಿರಗಳು ಅನಿವಾರ್ಯವಾಗಿದೆ ಎಂದರು.

ಸಂತ ಆಗ್ನಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಮುಹಮ್ಮದ್ ನಿಯಾಝ್ ಅತಿಥಿ ಭಾಷಣ ಮಾಡಿದರು. ಪಿಎಫ್‌ಐ ಬಂಟ್ವಾಳ ತಾಲೂಕು ಅಧ್ಯಕ್ಷ ಇಜಾಝ್ ಅಹ್ಮದ್ ಹಾಗೂ ಮಂಗಳೂರು ತಾಲೂಕು ಅಧ್ಯಕ್ಷ ನವಾಝ್ ಉಳ್ಳಾಲ್ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿದರು.

ವೇದಿಕೆಯಲ್ಲಿ ಸಿಎಫ್‌ಐ ದ.ಕ. ಜಿಲ್ಲಾಧ್ಯಕ್ಷ ಅಥಾವುಲ್ಲ ಪೂಂಜಲ್‌ಕಟ್ಟೆ ಮತ್ತಿತರರು ಉಪಸ್ಥಿತರಿದ್ದರು. ಇಫಾಝ್ ಸ್ವಾಗತಿಸಿ, ವಂದಿಸಿದರು. ರಿಯಾಝ್ ಕಡಂಬು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News