ಕೊಣಾಜೆ: ಸ್ವಚ್ಛತೆಗಾಗಿ ಕಾವಲು ಪಡೆ ನಿಗಾ
Update: 2017-05-18 20:33 IST
ಕೊಣಾಜೆ, ಮೇ 18: ಕೊಣಾಜೆ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪಂಚಾಯತ್ ನಿಂದ ಕಾವಲು ಪಡೆ ರಚಿಸಲಾಗಿದ್ದು ಬುಧವಾರ ಸಂಚಾರಕ್ಕೆ ಚಾಲನೆ ನೀಡಲಾಯಿತು.
ಪ್ರತಿದಿನ ಸಂಜೆ ವೇಳೆ ವಾಹನದಲ್ಲಿ ಘೋಷಣೆಯೊಂದಿಗೆ ಸಂಚಾರ ನಡೆಯಲಿದ್ದು, ಕೊಣಾಜೆ ಪೊಲೀಸರು ಸಹಕಾರ ನೀಡಲಿದ್ದಾರೆ. ನರೇಗಾದ ಮಾಜಿ ಒಂಬುಡ್ಸ್‌ಮೆನ್ ಶೀನ ಶೆಟ್ಟಿ, ಕೊಣಾಜೆ ಪಿಸಿಒ ಕೇಶವ ಪೂಜಾರಿ, ಗ್ರಾ.ಪಂ. ಸದಸ್ಯರಾದ ಅಚ್ಚುತ ಗಟ್ಟಿ, ವೇದಾವತಿ ಗಟ್ಟಿ, ಜಾನ್ ಎಂ.ಸಲ್ದಾನ, ಸನತ್ ಕುಮಾರ್, ಕೃಷ್ಣ ಮೂಲ್ಯ, ಕೊಣಾಜೆ ಪೊಲೀಸರು ಹಾಗೂ ಗ್ರಾಮಸ್ಥರು ಈ ಸಂದರ್ಭ ಉಪಸ್ಥಿತರಿದ್ದರು.